Advertisement
ಶಿಯೋಮಿ ಬ್ರಾಂಡ್, ಒಂದು ಫೋನಿನಲ್ಲಿರುವ ವೈಶಿಷ್ಟéಗಳಿಗೆ ಎಷ್ಟು ಬೇಕೋ ಅಷ್ಟು ದರ ನಿಗದಿ ಮಾಡಿ, ಗ್ರಾಹಕ ನೀಡುವ ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಬ್ರಾಂಡ್ ಆಗಿರುವುದು ಅದರ ಗ್ರಾಹಕರಿಗೆ ತಿಳಿದೇ ಇದೆ. ಹಾಗಾಗಿಯೇ ಅದು ಕ್ಷಿಪ್ರ ಗತಿಯಲ್ಲಿ ಭಾರತದ ಮೊಬೈಲ್ ಮಾರಾಟದಲ್ಲಿ ನಂ. 1 ಸ್ಥಾನ ಗಳಿಸಿಕೊಂಡಿದೆ.
ಈ ಮೊಬೈಲ್ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. 6 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ: 14999 ರೂ.,) 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ (ದರ:15,999 ರೂ.), 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ. (ದರ: 17,999 ರೂ.). ನೀಲಿ, ಹಸಿರು ಮತ್ತು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಈ ಮೊಬೈಲ್ ದೊರಕುತ್ತದೆ. ಮಿ ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಲಭ್ಯ.
Related Articles
ರೆಡ್‌ಮಿ ಸಾಮಾನ್ಯವಾಗಿ ಭಾರತದಲ್ಲಿ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ಗಳನ್ನೇ ತನ್ನ ಫೋನ್‌ಗಳಿಗೆ ಅಳವಡಿಸುತ್ತಿತ್ತು. ನ್ಯಾಯಾಲಯದಲ್ಲಿದ್ದ ವಿವಾದವೊಂದರ ಕಾರಣ ಭಾರತದ ಫೋನುಗಳಿಗೆ ಮೀಡಿಯಾ ಟೆಕ್ ಪ್ರೊಸೆಸರ್ ಅಳವಡಿಸುತ್ತಿರಲಿಲ್ಲ. ಆದರೆ ಈಗ ವಿವಾದ ಬಗೆ ಹರಿದ ಕಾರಣ, ಭಾರತದಲ್ಲಿ ಮೀಡಿಯಾಟೆಕ್ ಪ್ರೊಸೆಸರ್‌ಗಳನ್ನು ಬಳಸುತ್ತಿದೆ. ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ಗಳನ್ನೇ ಇಷ್ಟಪಡುವ ಫ್ಯಾನ್ ವರ್ಗವಿದೆ. ಅಂಥವರಿಗೆ ಮೀಡಿಯಾ ಟೆಕ್ ಪ್ರೊಸೆಸರ್‌ಗಳು ಇಷ್ಟವಾಗುವುದಿಲ್ಲ. ಆದರೆ, ಮಿತವ್ಯಯ ದರದ ಉದ್ದೇಶದಿಂದ ಶಿಯೋಮಿ ಈ ಪೋನಿನಲ್ಲಿ ಮೀಡಿಯಾಟೆಕ್‌ನ ಹೀಲಿಯೋ ಜಿ.90 ಟ9 ಪ್ರೊಸೆಸರ್ ಬಳಸಿದೆ. ಇದು 12ಎನ್‌ಎಮ್ ಎಂಟು ಕೋರ್‌ಗಳ ಪ್ರೊಸೆಸರ್. 2.05 ಗಿ.ಹ. ವೇಗ ಹೊಂದಿದೆ. ಗೇಮ್‌ಗಳನ್ನು ಆಡುವಾಗ ಮೊಬೈಲ್ ಬಿಸಿಯಾಗಬಾರದೆಂದು ಪ್ರೊಸೆಸರ್‌ಗೆ ಲಿಕ್ವಿಡ್ ಕೂಲಿಂಗ್ ಸಿಸ್ಟಂ ಇದೆ. ಇದು ಅಂಡ್ರಾಯ್ಡ 9 ಪೈ ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಗ್ರಾಹಕರ ಬಳಕೆಯನ್ನು ಇನ್ನಷ್ಟು ಸರಳಗೊಳಿಸಲು, ಹೆಚ್ಚುವರಿಯಾಗಿ ಇದಕ್ಕೆ ಎಂಐಯುಐ 10 ಯೂಸರ್ ಇಂಟರ್‌ಫೇಸ್ ನೀಡಲಾಗಿದೆ. ಇಷ್ಟು ಲೇಟೆಸ್ಟ್ ಆಗಿ ನೀಡಿರುವ ಮೊಬೈಲ್‌ಗೆ ಅಂಡ್ರಾಯ್ಡ 10 ಸೌಲಭ್ಯವನ್ನು ಕಲ್ಪಿಸಬಹುದಿತ್ತು.
Advertisement
ಬ್ಯಾಟರಿ ಬ್ಯಾಕಪ್ಶಿಯೋಮಿ ಫೋನ್‌ಗಳಲ್ಲಿ ಎದ್ದು ಕಾಣುವ ಅಂಶ ಎಂದರೆ ಅವುಗಳ ದೊಡ್ಡ ಬ್ಯಾಟರಿ. ಸಾಮಾನ್ಯವಾಗಿ ಅನೇಕ ಶಿಯೋಮಿ ಫೋನ್‌ಗಳಲ್ಲಿ 4000 ಎಂಎಎಚ್ ಬ್ಯಾಟರಿ ಇದ್ದೇ ಇರುತ್ತದೆ. ಹೆಚ್ಚು ಬ್ಯಾಟರಿ ಬೇಕೆನ್ನುವ ಗ್ರಾಹಕರಿಗೆ ಇದು ಸಹಾಯಕ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದರಲ್ಲಿ 4500 ಎಂಎಎಚ್ ಬ್ಯಾಟರಿ ಹಾಕಲಾಗಿದೆ. ಅಷ್ಟೇ ಅಲ್ಲ, 18 ವ್ಯಾಟ್ಸ್‌ನ, ಟೈಪ್ ಸಿ, ವೇಗದ ಜಾರ್ಜರ್ ಅನ್ನು ಜೊತೆಗೆ ನೀಡಲಾಗಿದೆ! ಫೋನ್ ತೆರೆಯಲು ಬೆರಳಚ್ಚು ಶೋಧಕ (ಫಿಂಗರ್‌ಪ್ರಿಂಟ್ ಸ್ಕ್ಯಾನರ್) ಫೋನಿನ ಹಿಂಬದಿ ಇದೆ. ನಾಲ್ಕು ಲೆನ್ಸ್‌ಗಳ ಹಿಂಬದಿ ಕ್ಯಾಮರಾ
64 ಮೆಗಾ ಪಿಕ್ಸಲ್ ಮುಖ್ಯ ಲೆನ್ಸ್ ಉಳ್ಳ ಕ್ಯಾಮರಾ ಇದರ ವೈಶಿಷ್ಟ್ಯ. ಇದಕ್ಕೆ 8 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್, 2 ಮೆ.ಪಿ. ಸೂಕ್ಷ್ಮ ಲೆನ್ಸ್, ಮತ್ತು 2 ಮೆ.ಪಿ. ಡೆಪ್ತ್ ಸೆನ್ಸರ್ ಕ್ಯಾಮರಾಗಳನ್ನು ಸಹ ನೀಡಲಾಗಿದೆ. ಈ ಹಣಕ್ಕೆ ಉತ್ತಮ ಕ್ಯಾಮರಾ ಇದೆ ಎಂಬುದರಲ್ಲಿ ಸಂದೇಹವಿಲ್ಲ. ಸೆಲ್ಫಿ ಪ್ರಿಯರಿಗಾಗಿ 20 ಮೆಗಾ ಪಿಕ್ಸಲ್ ಮುಂಬದಿ ಕ್ಯಾಮರಾವಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ
ಇದು 6.53 ಇಂಚಿನ ಐಪಿಎಸ್ ಎಲ್‌ಸಿಡಿ ಪರದೆ ಹೊಂದಿದೆ. 1080×2340 ಪಿಕ್ಸಲ್, 395 ಪಿಪಿಐ, ಫುಲ್‌ಎಚ್‌ಡಿ ಪ್ಲಸ್ ರೆಸ್ಯೂಲೇಶನ್ ಹೊಂದಿದೆ. ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸಹ ಇದೆ. ಪರದೆಯ ಮಧ್ಯದಲ್ಲಿ ನೀರಿನ ಹನಿ ಬೀಳುವಂಥ ನಾಚ್ ಇದೆ. (ಇದು ಸೆಲ್ಫಿà ಕ್ಯಾಮರಾ ಲೆನ್ಸ್ ಇರಿಸುವ ಸಲುವಾಗಿ). ಇದಕ್ಕೆ ಎರಡು ಸಿಮ್‌ಕಾರ್ಡ್ ಹಾಕಿ, ಮೆಮೊರಿ ಕಾರ್ಡ್ ಸಹ ಹಾಕಬಹುದು. ಗಾಜಿನ ದೇಹ ಹೊಂದಿದೆ. ಹಿಂಬದಿಯ ಗಾಜಿನ ದೇಹಕ್ಕು ಸಹ ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆ ನೀಡಿರುವುದು ವಿಶೇಷ. ಕೆ.ಎಸ್. ಬನಶಂಕರ ಆರಾಧ್ಯ