Advertisement

81 ವಿದ್ಯಾರ್ಥಿಗಳಿಗೆ ಒಂದು ಲೀಟರ್ ಹಾಲು ; ಯೋಗಿ ಸರಕಾರದ ಯೋಗ್ಯತೆಗೆ ಪೋಷಕರ ಛೀಮಾರಿ

09:54 AM Nov 30, 2019 | Hari Prasad |

ಲಕ್ನೋ: ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಇಲ್ಲಿನ ಸೋನಭದ್ರಾ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಸುಮಾರು 81 ಮಕ್ಕಳಿಗೆ ಕೇವಲ ಒಂದು ಲೀಟರ್ ಹಾಲನ್ನು ಸರಬರಾಜು ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರನ್ನು ಬೆರೆಸಿರುವುದೂ ಸಹ ಗೊತ್ತಾಗಿದೆ. ನವಂಬರ್ 27ರಂದು ನಡೆದಿದೆ ಎನ್ನಲಾಗಿರುವ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

Advertisement

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ನಿಗದಿಪಡಿಸಿರುವ ಮೆನು ಪ್ರಕಾರ ಶಾಲಾ ಮಕ್ಕಳಿಗೆ ಅನ್ನ ಮತ್ತು ಹಾಲನ್ನು ನೀಡಬೇಕು. ಆದರೆ ಇಲ್ಲಿನ ಕೋಟಾ ಗ್ರಾಮದಲ್ಲಿನ ಸಲಾಯ್ ಬನ್ವಾ ಪ್ರಾಥಮಿಕ ಶಾಲೆಯಲ್ಲಿರುವ 81 ಮಕ್ಕಳಿಗೆ ಒಂದು ಬಕೆಟ್ ನೀರಿಗೆ ಒಂದು ಲೀಟರ್ ಹಾಲನ್ನು ಬೆರೆಸಿ ಮಕ್ಕಳಿಗೆ ನೀಡಲಾಗಿದೆ.

ಶಾಲಾ ಅಧಿಕಾರಿಗಳು ಕೇವಲ ಒಂದು ಲೀಟರ್ ಹಾಲನ್ನು ಮಾತ್ರವೇ ನೀಡಿದ್ದಾರೆ ಎಂದು ಬಿಸಿಯೂಟ ತಯಾರಕರು ಆರೋಪಿಸಿದ್ದಾರೆ. ಈ ಹಿಂದೆಯೂ ಶಾಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಮಿರ್ಜಾಪುರದಲ್ಲಿರುವ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟವಾಗಿ ಶಾಲಾ ಮಕ್ಕಳಿಗೆ ಬರೀ ರೊಟ್ಟಿಗೆ ಉಪ್ಪು ನೀಡುವ ಮೂಲಕ ಯೋಗಿ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಟೀಕೆಗೆ ಗುರಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next