Advertisement
ಹೌದು, ಸಾಫ್ಟ್ವೇರ್ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸತ್ಯ ನಾದೆಳ್ಲ ವಾರ್ಷಿಕವಾಗಿ 305 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಅಂದರೆ ಮಾಸಿಕ ಸರಿಸುಮಾರು 26 ಕೋಟಿ ರೂ.! ಪ್ರಸಕ್ತ ವರ್ಷದಲ್ಲಿ ನಾದೆಳ್ಲ ಅವರ ಮೂಲ ವೇತನದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ. ಅದರಂತೆ ಅವರಿಗೆ 7.11 ಕೋಟಿ ರೂ. ಹೆಚ್ಚುವರಿ ವೇತನ ಸಿಕ್ಕಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ.
2014ರಲ್ಲಿ ಸ್ಟೀವ್ ಬಾಲ್ಮರ್‌ರಿಂದ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದ ಸತ್ಯ, ಮೊದಲ ವರ್ಷದಲ್ಲಿ 599 ಕೋಟಿ ರೂ.ಗಳನ್ನು ವೇತನ ರೂಪದಲ್ಲಿ ಪಡೆದಿದ್ದರು. ಅದು ಅವರ ಆವರೆಗಿನ ವೃತ್ತಿಜೀವನದ ಅತೀ ಹೆಚ್ಚು ವೇತನವಾಗಿತ್ತು.
Related Articles
ಭಾರತೀಯರಿಗೆ ಸತ್ಯ ನಾದೆಳ್ಲ ವೇತನ ಹೆಚ್ಚೇ ಅನಿಸಬಹುದು. ಆದರೆ ಜಗತ್ತಿನಲ್ಲೇ ಅತೀ ಹೆಚ್ಚು ವೇತನ ಪಡೆಯುವ ಸಿಇಒ ಎಲಾನ್ ಮಾಸ್ಕ್. ಟೆಸ್ಲಾ ಕಂಪೆನಿಯ ಸಿಇಒ ಆಗಿರುವ ಮಾಸ್ಕ್ಗೆ ವಾರ್ಷಿಕವಾಗಿ 3,651 ಕೋಟಿ ರೂ. ವೇತನವಿದೆ.
Advertisement