ಹೊಸದಿಲ್ಲಿ: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ 10 ಸಾವಿರ ಉದ್ಯೋಗ ಕಡಿತ ಮಾಡುವ ಘೋಷಣೆ ಮಾಡಿದೆ.
ಪ್ರಸಕ್ತ ವರ್ಷದ ಮೂರನೇ ತ್ತೈಮಾಸಿಕದ ಮುಕ್ತಾಯದ ಒಳಗಾಗಿ ಒಟ್ಟು ಉದ್ಯೋಗಿಗಳ ಶೇ.5ರಷ್ಟು ಪ್ರಮಾಣದಷ್ಟು ಉದ್ಯೋಗ ಕಡಿತ ಮಾಡುವ ನಿರ್ಧಾರ ಪ್ರಕಟಿಸಿದೆ.
ಈ ಬಗ್ಗೆ ಕಂಪೆನಿ ಅಧ್ಯಕ್ಷ ಸತ್ಯ ನಾದೆಲ್ಲಾ ಉದ್ಯೋಗಿಗಳಿಗೆ ಇ-ಮೇಲ್ ಮಾಡಿದ್ದಾರೆ. ಕೆಲವೊಂದು ವಿಭಾಗಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದಿದ್ದಾರೆ.
ಕಳೆದ ವರ್ಷದ ಜೂ.30 ಮುಕ್ತಾಯದ ವೇಳೆಗೆ ಅಮೆರಿಕದಲ್ಲಿ 1,22,000 ಉದ್ಯೋಗಿಗಳು ಸೇರಿದಂತೆ 2,21,000 ಮಂದಿ ಇದ್ದರು. ಇದೇ ವೇಳೆ, ಗೋಮೆಕ್ಯಾನಿಕ್ ಕಂಪೆನಿಯಿಂದಲೂ ಶೇ.70 ಮಂದಿ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ. ಜತೆಗೆ ಕಂಪನಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದೆ ಎಂದೂ ಆರೋಪಿಸಲಾಗಿದೆ.
Related Articles