Advertisement

ಮೈಕ್ರೋಸಾಫ್ಟ್ ನಿಂದ ಶೇ.1 ಸಿಬ್ಬಂದಿ ವಜಾ

10:39 AM Jul 15, 2022 | Team Udayavani |

ವಾಷಿಂಗ್ಟನ್‌: ಸಾಫ್ಟ್ ವೇರ್‌  ದಿಗ್ಗಜ ಮೈಕ್ರೋಸಾಫ್ಟ್ ತನ್ನ ಒಟ್ಟು ಸಿಬ್ಬಂದಿಯ ಪೈಕಿ ಶೇ.1ರಷ್ಟು ಮಂದಿಯನ್ನು ವಜಾ ಮಾಡಿದೆ. ಎಲ್ಲಾ ಹಂತದ ಉದ್ಯೋಗಿಗಳಿಗೆ ಕೂಡ ಇದು ಅನ್ವಯವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Advertisement

ಜೂ.30ಕ್ಕೆ ಸಂಸ್ಥೆಯ ಆರ್ಥಿಕ ವರ್ಷ ಪೂರ್ಣಗೊಂಡಿದ್ದು, ಆ ವೇಳೆ ಹುದ್ದೆಗಳಲ್ಲಿ ಅನೇಕ  ಬದಲಾವಣೆ ಮಾಡಲಾಗಿದೆ. ಇದರ ಜತೆಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವ ಮೂಲಕ ಉದ್ಯೋಗಿಗಳು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿಕೊಳ್ಳಲಾಗುತ್ತದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಈ ನಡುವೆ, ಇಂಟರ್‌ನೆಟ್‌ ದೈತ್ಯ ಗೂಗಲ್‌ನಲ್ಲಿ ಈ ವರ್ಷದಲ್ಲಿ ನೇಮಕಾತಿಗಳನ್ನು ಕಡಿಮೆ ಮಾಡುವುದಾಗಿ ಸಂಸ್ಥೆಯ ಮುಖ್ಯಸ್ಥ ಸುಂದರ್‌ ಪಿಚೈ ತಿಳಿಸಿದ್ದಾರೆ.

2022-23ರಲ್ಲಿ ಇಂಜಿನಿಯರ್‌ಗಳು, ತಾಂತ್ರಿಕ ಪರಿಣತರು ಮತ್ತು ಅತ್ಯಗತ್ಯ ಕ್ಷೇತ್ರಕ್ಕೆ ಮಾತ್ರ ನೇಮಕಾತಿ ಮಾಡಿಕೊಳ್ಳಾಗುವುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next