Advertisement

ಭಾರತೀಯರ ಫೇವರಿಟ್‌ ಮೈಕ್ರೋಸಾಫ್ಟ್!

08:05 PM Jul 21, 2022 | Team Udayavani |

ನವದೆಹಲಿ: ಭಾರತದಲ್ಲಿರುವ ಐಟಿ ಪದವೀಧರರು ನಿಮ್ಮ ಕನಸಿನ ಉದ್ಯೋಗ ಕೊಡುವಂಥ ಕಂಪನಿ ಯಾವುದು ಎಂಬ ಪ್ರಶ್ನೆಗೆ ಬಹುತೇಕರು ಮೈಕ್ರೋಸಾಫ್ಟ್ ಇಂಡಿಯಾ ಕಂಪನಿಯ ಹೆಸರನ್ನು ಉಲ್ಲೇಖೀದ್ದಾರೆ.

Advertisement

ಕೆಲಸವೂ ಆರಾಮದಾಯಕವಾಗಿರಬೇಕು, ಕೆಲಸಕ್ಕೆ ತಕ್ಕ ಹಾಗೆ ಉತ್ತಮ ಸಂಬಳ ಸಿಗಬೇಕು, ಕೆಲಸದ ಒತ್ತಡದಲ್ಲಿ ಖಾಸಗಿ ಬದುಕು ಹಾಳಾಗಬಾರದು ಎಂಬರ್ಥದಲ್ಲಿ ಬಹುತೇಕ ಯುವ ಐಟಿ ಪದವೀಧರರು, ಯುವ ಐಟಿ ಉದ್ಯೋಗಿಗಳು ತಮ್ಮ ಪ್ರಥಮ ಆಯ್ಕೆ “ಮೈಕ್ರೋಸಾಫ್ಟ್ ಇಂಡಿಯಾ’ ಎಂದು ಹೇಳಿದ್ದಾರೆ.

ಭಾರತೀಯ ಉದ್ಯೋಗಿಗಳು ತಮಗೆ ಉದ್ಯೋಗ ನೀಡಿದ ಕಂಪನಿಗಳಿಂದ ಏನನ್ನು ಬಯಸುತ್ತಾರೆ? ಎಂಬ ವಿಚಾರವನ್ನಿಟ್ಟುಕೊಂಡು ರ್‍ಯಾಂಡ್‌ಸ್ಟಾಡ್‌ ಎಂಪ್ಲಾಯರ್‌ ಬ್ರ್ಯಾಂಡ್‌ ರೀಸರ್ಚ್‌(ಆರ್‌ಇಬಿಆರ್‌) ಎಂಬ ಹೆಸರಿನ ಸಮೀಕ್ಷೆಯಲ್ಲಿ ಶೇ.63 ಉದ್ಯೋಗಿಗಳು ಜೀವನ ಮತ್ತು ಕೆಲಸ ಎರಡೂ ಸಮತೋಲನದಲ್ಲಿ ಸಾಗಬೇಕೆನ್ನುವುದಕ್ಕೆ ಆದ್ಯತೆ ನೀಡಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಹಲವಾರು ಮಂದಿ, ಅತ್ಯುತ್ತಮ ವೇತನ, ಉದ್ಯೋಗ ಹಾಗೂ ಜೀವನದ ಭದರ್ತೆಗಳಿಗೆ ಆದ್ಯತೆ ನೀಡಿದ್ದಾರೆ. ಸಂಸ್ಥೆಗೆ ಒಳ್ಳೆಯ ಹೆಸರಿರಬೇಕು ಎಂದೂ ಹಲವಾರು ಮಂದಿ ಇಷ್ಟಪಟ್ಟಿದ್ದಾರೆ. ಸಾಮಾಜಿಕ ವಲಯದಲ್ಲಿ ಕಂಪನಿಗೆ ಇರುವ ಗೌರವವೂ ತಮಗೆ ಹೆಮ್ಮೆಯ ವಿಚಾರ ಎಂದು ಸಮೀಕ್ಷೆಯ ವೇಳೆ ಉದ್ಯೋಗಿಗಳು ಹೇಳಿಕೊಂಡಿದ್ದಾರೆ.

ದೇಶೀಯ ಕಂಪನಿಗಳಿಗೆ ದ್ವಿತೀಯ ಆದ್ಯತೆ:

Advertisement

ಅಂದಹಾಗೆ, ಮೈಕ್ರೋಸಾಫ್ಟ್ ನಂತರ ಮತ್ಯಾವ ಕಂಪನಿಗಳಲ್ಲಿ ಕೆಲಸ ಮಾಡಲು ಇಷ್ಟ ಎಂದು ಕೇಳಲಾದ ಪ್ರಶ್ನೆಗಳಿಗೆ ಹಲವಾರು ಮಂದಿ ದೇಶೀಯ ಕಂಪನಿಗಳಾದ ಇನ್ಫೋಸಿಸ್‌, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಕಡೆಗೆ ಒಲವು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next