Advertisement

ತೆಲಂಗಾಣಕ್ಕೆ ಮೈಕ್ರೋಸ್ಟಾಫ್ಟ್ ಜಾಕ್‌ಪಾಟ್‌ :15000 ಕೋಟಿ ಮೌಲ್ಯದ ಡೇಟಾ ಸೆಂಟರ್‌ ಸ್ಥಾಪನೆ

08:22 PM Jul 21, 2021 | Team Udayavani |

ಹೈದರಾಬಾದ್‌: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆ ಮೈಕ್ರೋಸಾಫ್ಟ್ ತೆಲಂಗಾಣದಲ್ಲಿ ಡೇಟಾ ಸೆಂಟರ್‌ ಒಂದನ್ನು ಸ್ಥಾಪಿಸಲು ಮುಂದಾಗಿದೆ.

Advertisement

ಅದಕ್ಕಾಗಿ ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿದೆ. ಅದಕ್ಕಾಗಿ ಒಟ್ಟು 15 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಸಂಸ್ಥೆ ಮುಂದಾಗಿದೆ. ಈ ಉದ್ದೇಶಕ್ಕಾಗಿ ಹೈದರಾಬಾದ್‌ ಸಮೀಪದಲ್ಲಿ ಜಮೀನು ಒದಗಿಸಲೂ ರಾಜ್ಯ ಸರ್ಕಾರ ಮುಂದಾಗಿದೆ.

ಸಾಫ್ಟ್ ವೇರ್ ದಿಗ್ಗಜನ ಜೊತೆಗೆ ರಿಲಯನ್ಸ್‌ ಜಿಯೋ ಕೂಡ ಸಹಭಾಗಿತ್ವ ಹೊಂದಿದೆ. ಎರಡೂ ಕಂಪನಿಗಳೂ ಕ್ಲೌಡ್ ಡೇಟಾ ಕೇಂದ್ರಗಳನ್ನು ಸ್ಥಾಪಿಸಲಿವೆ. ಈ ಒಪ್ಪಂದದ ಅನುಸಾರವಾಗಿಯೇ ಜಿಯೋ ನೆಟ್‌ವರ್ಕ್‌ನಲ್ಲಿ ಅಜ್ಯೂರ್‌ ಕ್ಲೌಡ್ ಎಂಬ ಹೊಸ ವ್ಯವಸ್ಥೆಯೂ ಜಾರಿಗೆ ಬಂದಿದೆ. ಇದಲ್ಲದೆ, ಅಮೆಜಾನ್‌ ವೆಬ್‌ಸರ್ವಿಸ್‌ ಮತ್ತು ಗೂಗಲ್‌ ಕೂಡ ದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಮುಂದಾಗಿವೆ.

ಇದನ್ನೂ ಓದಿ :BSY ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ : ಸುಬ್ರಮಣಿಯನ್‌ ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next