Micro Finance: ಮೀಟರ್ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ
ನಂಜನಗೂಡಿನ ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ದಬ್ಬಾಳಿಕೆ
Team Udayavani, Jan 16, 2025, 7:40 AM IST
ಮೈಸೂರು: ಮೈಕ್ರೋ ಫೈನಾನ್ಸ್ ಮತ್ತು ಮೀಟರ್ ಬಡ್ಡಿಯವರ ಕಿರುಕುಳಕ್ಕೆ ಹೆದರಿ ಚಾಮರಾಜನಗರ ಜಿಲ್ಲೆ ಯಳಂದೂರಿನ 80ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದ ಪ್ರಕರಣ ಮಾಸುವ ಮುನ್ನವೇ, ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸೇರಿ ಹಲವು ಗ್ರಾಮಗಳ 100ಕ್ಕೂ ಹೆಚ್ಚು ಕುಟುಂಬಗಳು ಮನೆಗೆ ಬೀಗ ಹಾಕಿ ಗ್ರಾಮ ತೊರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಲ ಪಡೆದಿರುವ ಕುಟುಂಬಗಳ ಮನೆಗಳ ಮುಂಭಾಗದಲ್ಲಿ ಫಲಕ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಕೆಲವು ಮನೆಗಳಿಗೆ ಬೀಗ ಜಡಿದು ಕುಟುಂಬದವರನ್ನು ಹೊರದಬ್ಬಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.
ಸರಕಾರ ಮಧ್ಯಪ್ರವೇಶಿಸಲಿ
ಗ್ರಾಮಶಕ್ತಿ, ಫೈವ್ ಸ್ಟಾರ್, ಎಲ್ ಆ್ಯಂಡ್ ಟಿ ಮೈಕ್ರೋ ಫೈನಾನ್ಸ್ಗಳು ಆಮಿಷಗಳನ್ನು ಒಡ್ಡಿ ಬಲವಂತವಾಗಿ ಸಾಲ ಕೊಡುವ ಮೈಕ್ರೋ ಫೈನಾನ್ಸ್ಗಳು ಅನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ನೀಡುತ್ತಿವೆ. ಇದರ ಬಗ್ಗೆ ಸರಕಾರ ಮಧ್ಯ ಪ್ರವೇಶಿಸಿ ಗ್ರಾಮದಿಂದ ಹೋಗಿರುವವರನ್ನು ಮರಳಿ ಕರೆತರಬೇಕೆಂದು ಮುಖಂಡರಾದ ಶಿರಮಲ್ಲಿ ಹುಚ್ಚಯ್ಯ ಆಗ್ರಹಿಸಿದ್ದಾರೆ.
ಸಾಲ ಕಟ್ಟದೇ ಕುಟುಂಬಗಳು ಗ್ರಾಮಗಳನ್ನು ತೊರೆದಿರುವುದು ನಮಗೆ ಗೊತ್ತಿಲ್ಲ. ಫೈನಾನ್ಸ್ ಹಾವಳಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಂಜನಗೂಡು ತಾಲೂಕಿನಲ್ಲಿರುವ ಖಾಸಗಿ ಫೈನಾನ್ಸ್ನವರನ್ನು ಕರೆಸಿ ಶೀಘ್ರದಲ್ಲೇ ಸಭೆ ಮಾಡಿ ಹಣ ಕಟ್ಟಲು ಕಾಲಾವಕಾಶ ನೀಡುವಂತೆ ನಿರ್ದೇಶನ ನೀಡಲಾಗುವುದು. -ಶಿವಕುಮಾರ್ ಕಾಸ್ನೂರು, ತಹಶೀಲ್ದಾರ್ ನಂಜನಗೂಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಾಣಂತಿ ಸಾವು ಪ್ರಕರಣ… ಶವಾಗಾರದ ಎದುರು ಕುಟುಂಬಸ್ಥರ ಪ್ರತಿಭಟನೆ
ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು
ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ
MUST WATCH
ಹೊಸ ಸೇರ್ಪಡೆ
Belthangady: ಫೆಬ್ರವರಿಗೇ ಕಾಮಗಾರಿ ಮುಗಿಸಿ; ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ
Belthangady: 2.13 ಕೋ. ಲೀ. ನೀರಿನ ಕೃಷಿ ಹೊಂಡ; ಉಜಿರೆಯ ಅತ್ತಾಜೆಯಲ್ಲಿ ನಿರ್ಮಾಣ
ಶರಣಾಗತಿಯತ್ತ ನಕ್ಸಲ್ ರವೀಂದ್ರನ ಚಿತ್ತ…! ನಕ್ಸಲರಿಂದ ಮುಕ್ತವಾಗುತ್ತಾ ಕರುನಾಡು?
Pushpa 2: ಓಟಿಟಿಯಲ್ಲಿ ಹೊಸ ದಾಖಲೆ ಬರೆಯಲಿದೆ ʼಪುಷ್ಪ-2ʼ: ಏನದು?
Uttar Pradeshದಲ್ಲಿ ಮತ್ತೊಂದು ದುರಂತ: ಲಡ್ಡು ಮಹೋತ್ಸವದಲ್ಲಿ ಕಾಲ್ತುಳಿತ-7 ಮಂದಿ ಸಾ*ವು