Advertisement

ಟೀಂ ಇಂಡಿಯಾವನ್ನು ಅತ್ಯಂತ ಕಳಪೆ ಎಂದು ಜರಿದ ಮೈಕಲ್ ವಾನ್

11:38 AM Nov 11, 2022 | Team Udayavani |

ಅಡಿಲೇಡ್: ಟಿ20 ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 10 ವಿಕೆಟ್‌ ಗಳ ಅಂತರದ ಅವಮಾನಕರ ಸೋಲನುಭವಿಸಿದೆ. ಭಾರತ ತಂಡದ ವಿರುದ್ಧ ಸದಾ ಕಿಡಿಕಾರುವ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೆಲ್ ವಾನ್ ತಮ್ಮ ಟೀಕೆ ಮುಂದುವರಿದಿದ್ದು, “ಇತಿಹಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನದ ವೈಟ್-ಬಾಲ್ ತಂಡ” ಎಂದು ಜರೆದಿದ್ದಾರೆ.

Advertisement

ಫೈನಲ್‌ ಗೆ ತಲುಪುವ ನೆಚ್ಚಿನ ತಂಡವೆಂದು ಪರಿಗಣಿಸಲ್ಪಟ್ಟ ರೋಹಿತ್ ಶರ್ಮಾ ಪಡೆಯು ಸೆಮಿ ಫೈನಲ್ ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದೆ ಸೋಲನುಭವಿಸಿತು.

ಭಾರತದ ವೈಟ್-ಬಾಲ್ ಆಟವನ್ನು ಪ್ರಶ್ನಿಸಿದ ವಾನ್, “ವಿಶ್ವಕಪ್ ಓವರ್ 50 ಗೆದ್ದ ನಂತರ ಅವರು ಏನು ಮಾಡಿದ್ದಾರೆ? ಏನೂ ಇಲ್ಲ. ಭಾರತವು ಇನ್ನೂ ಹಳೆಯ ರಿತಿಯಲ್ಲಿ ವೈಟ್-ಬಾಲ್ ಆಟವನ್ನು ಆಡುತ್ತಿದೆ” ಎಂದಿದ್ದಾರೆ.

“ಭಾರತವು ಇತಿಹಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನದ ವೈಟ್-ಬಾಲ್ ತಂಡವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಆಡುವ ವಿಶ್ವದ ಪ್ರತಿಯೊಬ್ಬ ಆಟಗಾರನು ಅದರಿಂದ ತಮ್ಮ ಆಟದ ಹೇಗೆ ಸುಧಾರಣೆ ಕಂಡಿದೆ ಎಂದು ಹೇಳುತ್ತಾರೆ. ಆದರೆ ಭಾರತಕ್ಕೆ ಇದುವರೆಗೆ ಏನನ್ನು ನೀಡಿದೆ?” ಎಂದು ವಾನ್ ಅವರು ದಿ ಟೆಲಿಗ್ರಾಫ್‌ ಗೆ ಬರೆದ ತಮ್ಮ ಅಂಕಣದಲ್ಲಿ ಹೇಳಿದ್ದಾರೆ.

ತಂಡದ ಭಾಗವಾಗಿದ್ದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ್ನನು ಯಾಕೆ ಒಂದೂ ಪಂದ್ಯದಲ್ಲಿ ಆಡಿಸಲಿಲ್ಲ ಎಂದು ವಾನ್ ಪ್ರಶ್ನಿಸಿದ್ದಾರೆ. ಪೂರ್ಣ ಕೂಟದಲ್ಲಿ ಚಾಹಲ್‌ ಗಿಂತ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್‌ ಗೆ ಆದ್ಯತೆ ನೀಡಲಾಯಿತು.

Advertisement

ಇದನ್ನೂ ನೋಡಿ:ವಂದೇ ಭಾರತ್ ಮತ್ತು ಭಾರತ್ ಗೌರವ್ ಕಾಶಿ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ವಿಶ್ವದ ಶ್ರೀಮಂತ ಬೋರ್ಡ್ ಆಗಿರುವ ಬಿಸಿಸಿಐ ನ್ನುಯಾರೂ ಪ್ರಶ್ನಿಸುವುದಿಲ್ಲ ಎಂದು ವಾನ್ ಹೇಳಿದ್ದಾರೆ. “ಯಾರೂ ಅವರನ್ನು (ಬಿಸಿಸಿಐ) ಟೀಕಿಸಲು ಬಯಸುವುದಿಲ್ಲ ಯಾಕೆಂದರೆ ನಿಮ್ಮ ಸಾಮಾಜಿಕ ಮಾಧ್ಯಮದ ತಂಡ ಒಳ್ಳೆಯದಿದೆ. ಕೆಲವು ಪಂಡಿತರು ಭಾರತದಲ್ಲಿ ಮುಂದೊಂದು ದಿನ ಕೆಲಸ ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಾರೆ. ಆದರೆ ಅದನ್ನು ನೇರವಾಗಿ ಹೇಳುವ ಸಮಯ ಬಂದಿದೆ. ಅವರು ತಮ್ಮ ಶ್ರೇಷ್ಠ ಆಟಗಾರರ ಹಿಂದೆ ಅಡಗಿಕೊಳ್ಳಬಹುದು ಆದರೆ ಸರಿಯಾದ ಒಂದು ತಂಡವಾಗಿ ಆಡುವ ಬಗ್ಗೆ ಯೋಚಿಸಬೇಕು. ಒಟ್ಟಾರೆಯಾಗಿ, ಅವರ ಬೌಲಿಂಗ್ ಆಯ್ಕೆಗಳು ತುಂಬಾ ಕಡಿಮೆಯಿದೆ, ಬ್ಯಾಟಿಂಗ್ ಸಾಕಷ್ಟು ಆಳವಾಗಿಲ್ಲ ಮತ್ತು ಸ್ಪಿನ್ ನಲ್ಲಿ ತಂತ್ರಗಾರಿಕೆ ಇಲ್ಲ” ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next