Advertisement

ಆಸೀಸ್‌ ತಂಡದ ನಾಯಕತ್ವಕ್ಕೆ ಮತ್ತೆ ಮೈಕೆಲ್‌ ಕ್ಲಾರ್ಕ್‌ ಸಜ್ಜು

06:35 AM Apr 09, 2018 | |

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಿಲುಕಿದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಪರಿಸ್ಥಿತಿ ಈಗ ಬಿರುಗಾಳಿಗೆ ಸಿಲುಕಿದ ಹಡಗಿನಂತಾಗಿದೆ.

Advertisement

ಕಾಂಗರೂಗಳಿಗೆ ಸೂಕ್ತ ನಾಯಕತ್ವದ ಕೊರತೆ ಎದುರಾಗಿದೆ. ಇದನ್ನು ತುಂಬಲು ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ಅವರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಕೇಳಿಕೊಂಡಿದೆ. ಮೂಲಗಳ ಪ್ರಕಾರ ಆಸೀಸ್‌ ತಂಡವನ್ನು ಸೇರಲು ಸ್ವತಃ ಕ್ಲಾರ್ಕ್‌ ಕೂಡ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮಾಜಿ ನಾಯಕ ಕ್ಲಾರ್ಕ್‌ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇತ್ತೀಚೆಗೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಬ್ಯಾನ್‌ಕ್ರಾಫ್ಟ್ ಅವರ ತಲೆ ದಂಡವಾಗಿತ್ತು. ಹೀಗಾಗಿ 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಕ್ಲಾರ್ಕ್‌ಗೆ ಮತ್ತೆ ತಂಡ ಸೇರಿಕೊಳ್ಳುವ ಅವಕಾಶ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next