Advertisement

ಎಂಐಸಿ ರಜತ ಮಹೋತ್ಸವ: ಬ್ರ್ಯಾಂಡ್‌ಗೆ ಧರ್ಮ, ರಾಜಕೀಯ ಬೆರೆಸದಿರಿ: ಹರೀಶ್‌ ಬಿಜೂರ್‌

12:52 AM Jan 29, 2023 | Team Udayavani |

ಮಣಿಪಾಲ: ಹೊಸ ಬ್ರ್ಯಾಂಡ್‌ ಸೃಷ್ಟಿಸುವ ಸಂದರ್ಭದಲ್ಲಿ ಧರ್ಮ ಮತ್ತು ರಾಜಕೀಯವನ್ನು ದೂರ ವಿಡದಿದ್ದರೆ ಬ್ರ್ಯಾಂಡ್‌ನ‌ಲ್ಲಿ ತಂದಾಗ ವಿಭಜನೆಯ ಹಲವು ಆಯಾಮಗಳು ಹುಟ್ಟಿಕೊಳ್ಳುತ್ತವೆ ಎಂದು ಬ್ರ್ಯಾಂಡ್‌ ಗುರು ಸಂಸ್ಥಾಪಕ ಹರೀಶ್‌ ಬಿಜೂರ್‌ ಹೇಳಿದರು.

Advertisement

ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌(ಎಂಐಸಿ)ಯ ರಜತ ಮಹೋತ್ಸವ ಮತ್ತು ಹಳೆ ವಿದ್ಯಾರ್ಥಿಗಳ ಸಹಮಿಲನ ಕಾರ್ಯ ಕ್ರಮವನ್ನು ಶನಿವಾರ ಹೊಟೇಲ್‌ ಫಾರ್ಚೂನ್‌ ವ್ಯಾಲಿವ್ಯೂನಲ್ಲಿ ಉದ್ಘಾ ಟಿಸಿ, “ಮೈಂಡ್‌ ದಿ ಗ್ಯಾಪ್‌- ದಿ ಕಮ್ಯೂ ನಿಕೇಶನ್‌ ಗ್ಯಾಪ್‌’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸಂವಹನ ವ್ಯವಸ್ಥೆಯೂ ಪ್ರಸ್ತುತ ತಂತ್ರಜ್ಞಾನಕ್ಕೆ ಪೂರಕವಾಗಿ ಬದಲಾಗುತ್ತಿದೆ. ಅದಕ್ಕೆ ಸರಿಯಾಗಿ ಎಂಐಸಿ ಕೂಡ ಒಗ್ಗಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದ ಜತೆಗೆ ಚಾಟ್‌ ಜಿಟಿಪಿ ಸಂವಹನ ಕ್ಷೇತ್ರದಲ್ಲಿ ಹಲವು ಬದಲಾವಣೆ ತರಲಿದೆ. ಸಂವಹನ ಒಂದು ಭಾಷೆಗೆ ಸೀಮಿತವಲ್ಲ. ಯಾವ ಭಾಷೆಯನ್ನು ಆಯ್ಕೆ ಮಾಡಿಕೊಂಡು ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ವಿಷಯ ತಲುಪಿಸುತ್ತೇವೆ ಎಂಬುದೇ ಮುಖ್ಯ. ನಾವೇನು ಮಾಡಬೇಕು ಎಂಬುದನ್ನು ಜನರು ಹೇಳುವ ಕಾಲ ಬರುತ್ತಿದೆ. ಹೀಗಾಗಿ ಸಂವಹನದ ಸವಾಲಿಗೂ ಸಜ್ಜಾಗಬೇಕು ಎಂದರು.

ಮಣಿಪಾಲದಲ್ಲಿ ಯುವ ಸಂಪತ್ತು
ಮಣಿಪಾಲ ದೇಶದ ಯುವನಗರ. ಇಲ್ಲಿ ಸದಾ ಸರಾಸರಿ 23 ವರ್ಷದವರೇ ಹೆಚ್ಚು. ದೇಶದ ಯಾವ ನಗರದಲ್ಲೂ ಈ ರೀತಿಯಿಲ್ಲ. ಮಣಿಪಾಲ ಸಣ್ಣ ನಗರವಾದರೂ ಯುವ ಸಂಪತ್ತು ಹೆಚ್ಚಿದೆ ಎಂದು ಬಣ್ಣಿಸಿದರು.

ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತ ನಾಡಿ, ಯುವ ಸಂಪತ್ತು ದೇಶದ ನಿಜವಾದ ಭವಿಷ್ಯ. ಈ ವಿಷಯದಲ್ಲಿ ಮಣಿಪಾಲ ಹೆಮ್ಮೆ ಪಡುವಂತಿದೆ. ಇಲ್ಲಿ ಯುವ ಜನರೇ ಹೆಚ್ಚಿದ್ದಾರೆ. ಎಂ.ವಿ. ಕಾಮತ್‌ ಅವರು ಬೆಳೆಸಿದ ಕೂಸು ಎಂಐಸಿ. ಅವರ ದೂರದೃಷ್ಟಿಯ ಜತೆಗೆ ಹಿಂದಿನ, ಈಗಿನ ನಿರ್ದೇಶಕರು, ಸಿಬಂದಿ ವಿದ್ಯಾರ್ಥಿ ಸಮೂಹದ ಕಾರ್ಯ ಸಾಧನೆ ಈ ಬೆಳವಣಿಗೆಯ ಮೆಟ್ಟಿಲಾಗಿದೆ ಎಂದರು.

Advertisement

ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಎಂಐಸಿ ಸ್ಥಾಪನೆ ಹಾಗೂ ಪ್ರಸ್ತುತ ಬೆಳೆದು ಬಂದಿರುವ ಹಾದಿಯ ಜತೆಗೆ ಡಾ| ಟಿಎಂಎ ಪೈ, ಡಾ| ರಾಮದಾಸ ಪೈ, ಎಂ.ವಿ.ಕಾಮತ್‌ ಅವರ ಕಾರ್ಯ ವನ್ನು ಸ್ಮರಿಸಿದರು.

ಸಮ್ಮಾನ
ಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ, ಮಾಜಿ ನಿರ್ದೇಶಕರಾದ ಡಾ| ಬೊರೊಶಿವದಾಸ್‌ ಗುಪ್ತ, ಡಾ| ವರದೇಶ ಹಿರೇಗಂಗೆ ಹಾಗೂ ಎಂಐಸಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾದ ಶರತ್‌ ಕುಮಾರ್‌, ವನಿತಾ ಪೈ, ಅಲೋಕ್‌ ಸಿಂಗ್‌ ಅವರನ್ನು ಸಮ್ಮಾನಿ ಸಲಾಯಿತು. ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಿಬಂದಿಯನ್ನು ಅಭಿನಂದಿಸಲಾಯಿತು.

ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌, ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ, ಡಾ| ಎಚ್‌.ಎಸ್‌. ಬಲ್ಲಾಳ್‌ ಅವರ ಪತ್ನಿ ಇಂದಿರಾ ಬಲ್ಲಾಳ್‌ ಸೇರಿದಂತೆ ವಿ.ವಿ.ಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಧ್ಯಾಪಿಕೆ ಡಾ| ಶುಭಾ ಎಚ್‌.ಎಸ್‌. ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next