Advertisement

ರಾಷ್ಟ್ರೀಯ ಸಿನಿಮಾ ದಿನ ಮುಂದೂಡಿಕೆ; ಸೆ.23ಕ್ಕೆ 75 ರೂ.ಗೆ ಸಿನಿಮಾ ಟಿಕೆಟ್‌

12:02 PM Sep 14, 2022 | Team Udayavani |

ನವದೆಹಲಿ: ಸೆ.16ರಂದು ಆಚರಿಸಬೇಕೆಂದು ನಿರ್ಧರಿಸಲಾಗಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಸೆ.23ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್ ಇಂಡಿಯಾ(ಎಂಎಐ) ತಿಳಿಸಿದೆ.

Advertisement

ಈ ವಿಶೇಷ ದಿನದ ಆಚರಣೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಮಯಾವಕಾಶ ಬೇಕು ಎಂದು ಷೇರುದಾರರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ ಮುಂದೂಡಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಸೆ.23ರಂದು ದೇಶಾದ್ಯಂತ ಪಿವಿಆರ್‌, ಐನಾಕ್ಸ್‌, ಸಿನಿಪೊಲಿಸ್‌ ಸೇರಿದಂತೆ ಒಟ್ಟು 4,000 ತೆರೆಗಳಲ್ಲಿ ಸಿನಿಮಾ ಟಿಕೆಟ್‌ ದರವನ್ನು 75 ರೂ.ಗೆ ವಿತರಿಸಲಾಗುವುದು.

ಕೊರೊನಾ ನಂತರ ಭಾರತೀಯ ಸಿನಿ ಕ್ಷೇತ್ರ ಅತ್ಯುತ್ತಮವಾಗಿ ಚೇತರಿಸಿಕೊಂಡಿರುವ ಹಿನ್ನೆಲೆ ಜನರಿಗೆ ಕೃತಜ್ಞಾಪೂರ್ವವಾಗಿ ಈ ರೀತಿಯ ವಿಶೇಷ ರಿಯಾಯಿತಿ ನೀಡುವುದಾಗಿ ಎಂಎಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next