Advertisement
ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಇತ್ತೀಚೆಗೆ ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಬಗ್ಗೆ ಸರಣಿ ಟ್ವೀಟ್ ಗಳನ್ನು ಹಾಕಿದ್ದರು. ಪ್ಯಾಲೆಸ್ತೀನ್ ಗೆ ಬೆಂಬಲವಾಗಿ ನಿಂತು ಮಿಯಾ ಟ್ವೀಟ್ ಮಾಡಿದ್ದರು.
Related Articles
Advertisement
ಪ್ಯಾಲೆಸ್ತೀನ್ ನಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಅಲ್ಲಿನ ನಾಗರೀಕರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ ಎಂದು ಮಿಯಾ ಟ್ವೀಟ್ ಮಾಡಿದ್ದರು.
ಸದ್ಯ ಮಿಯಾ ಖಲೀಫಾ ಟ್ವೀಟ್ ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಜೊತೆಯಲ್ಲಿ ಅವರ ಪಾಡ್ ಕಾಸ್ಟ್ ಒಪ್ಪಂದವೇ ಇದರಿಂದ ಮುರಿದು ಬಿದ್ದಿದೆ.
ಮಿಯಾ ಖಲೀಫಾ ರೆಡ್ ಲೈಟ್ ಹಾಲೆಂಡ್ ಕಂಪೆನಿಯಲ್ಲಿ ಪಾಡ್ ಕಾಸ್ಟ್ ಒಪ್ಪಂದವನ್ನು ಮಾಡಿಕೊಂಡಿದ್ದರು. ಈ ಟ್ವೀಟ್ ನಿಂದ ಆ ಕಂಪೆನಿ ಆಕ್ರೋಶ ವ್ಯಕ್ತಪಡಿಸಿದ್ದು, ಮಿಯಾ ಖಲೀಫಾರ ಒಪ್ಪಂದವನ್ನು ಕೊನೆಗೊಳಿಸಿದೆ.
ಮಿಯಾರ ಟ್ವೀಟ್ ನ್ನು ಉಲ್ಲೇಖಿಸಿ, “ಇದು ಅತ್ಯಂತ ಭಯಾನಕ ಟ್ವೀಟ್. ನಿಮ್ಮನ್ನು ತಕ್ಷಣವೇ ವಜಾಗೊಳಿಸಲಾಗುತ್ತದೆ. ಅಸಹ್ಯವನ್ನು ಕೂಡ ನೀವು ಮೀರಿದ್ದೀರಿ. ಉತ್ತಮ ಮಾನವರಾಗಿ. ನೀವು ಸಾವು, ಅತ್ಯಾಚಾರ, ಹಲ್ಲೆ,ಒತ್ತೆಯಾಳನ್ನು ಈ ರೀತಿ ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ನಿಮ್ಮ ಅಜ್ಞಾನವನ್ನು ಯಾವುದೇ ಪದಗಳು ವಿವರಿಸಲು ಸಾಧ್ಯವಿಲ್ಲ” ಎಂದು ಪಾಡ್ ಕಾಸ್ಟರ್ ಟಾಡ್ ಶಪಿರೋ ಟ್ವೀಟ್ ಮಾಡಿದ್ದಾರೆ.
“ಇಂತಹ ದುರಂತದ ಸಮಯದಲ್ಲಿ ನಾವೆಲ್ಲ ಒಗ್ಗೂಡುವ ಅಗತ್ಯವಿದೆ. ನೀವು ಉತ್ತಮ ವ್ಯಕ್ತಿಯಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಆದಾಗ್ಯೂ, ಇದು ನಿಮಗೆ ತುಂಬಾ ತಡವಾಗಿದೆ ಎಂದು ಸ್ಪಷ್ಟವಾಗಿ ತೋರುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ ಇದಕ್ಕೆ ಮಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮೂಲಕ ಅವರು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತನ್ನ ಹೇಳಿಕೆಯು ಯಾವುದೇ ರೀತಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ಯಾಲೆಸ್ತೀನಿಯನ್ ನಾಗರಿಕರನ್ನು ವಿವರಿಸಲು “ಸ್ವಾತಂತ್ರ್ಯ ಹೋರಾಟಗಾರರು” ಎಂಬ ಪದದ ಬಳಕೆಯನ್ನು ಅವರು ಸಮರ್ಥಿಸಿಕೊಂಡರು, ಅದು ಅವರ ಹೋರಾಟವನ್ನು ನಿಖರವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.