Advertisement

“ಮೈ ಕೇಪ್‌ಟೌನ್‌’ಪರ ರಶೀದ್‌, ರಬಾಡ, ಲಿವಿಂಗ್‌ಸ್ಟೋನ್‌ ಆಟ

10:23 PM Aug 11, 2022 | Team Udayavani |

ಕೇಪ್‌ಟೌನ್‌: ಮುಂದಿನ ವರ್ಷಾ ರಂಭದಲ್ಲಿ ನಡೆಯುವ ಚೊಚ್ಚಲ “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಟಿ20 ಲೀಗ್‌ಗೆ (ಸಿಎಸ್‌ಎ) ಬಿರುಸಿನ ಸಿದ್ಧತೆ ನಡೆಯುತ್ತಿದೆ. ಬುಧವಾರವಷ್ಟೇ ಮುಂಬೈ ಇಂಡಿಯನ್ಸ್‌ ಒಡೆತನದ ರಿಲಯನ್ಸ್‌ ಗ್ರೂಪ್‌ ತನ್ನೆರಡು ತಂಡಗಳ ಹೆಸರನ್ನು ಅನಾವರಣ ಮಾಡಿತ್ತು. ಇದರಲ್ಲೊಂದಾದ “ಮೈ ಕೇಪ್‌ಟೌನ್‌’ ತನ್ನ 5 ಮಂದಿ ಸ್ಟಾರ್‌ ಆಟಗಾರರ ಹೆಸರನ್ನು ಪ್ರಕಟಿಸಿದೆ.

Advertisement

ಇವರಲ್ಲಿ ಅಫ್ಘಾನಿಸ್ಥಾನದ ಸ್ಟಾರ್‌ ಸ್ಪಿನ್ನರ್‌ ರಶೀದ್‌ ಖಾನ್‌, ಆತಿಥೇಯ ನಾಡಿನ ಸ್ಪೀಡ್‌ಸ್ಟರ್‌ ಕಾಗಿಸೊ ರಬಾಡ ಮತ್ತು ಇಂಗ್ಲೆಂಡ್‌ನ‌ ಬ್ಯಾಟರ್‌ ಲಿಯಮ್‌ ಲಿವಿಂಗ್‌ಸ್ಟೋನ್‌ ಪ್ರಮುಖರು. ಉಳಿದಿಬ್ಬರೆಂದರೆ, “ಬೇಬಿ ಎಬಿಡಿ’ ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಆಟಗಾರ ಡಿವಾಲ್ಡ್‌ ಬ್ರೇವಿಸ್‌ ಮತ್ತು ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌.

ಇವರಲ್ಲಿ ಬ್ರೇವಿಸ್‌ ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರವೇ ಆಡಿದ್ದರು. ರಶೀದ್‌ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಪರ, ರಬಾಡ ಮತ್ತು ಲಿವಿಂಗ್‌ಸ್ಟೋನ್‌ ಪಂಜಾಬ್‌ ಕಿಂಗ್‌ ತಂಡವನ್ನು ಪ್ರತಿನಿಧಿಸಿದ್ದರು.

ಚೆನ್ನೈ ಫ್ರಾಂಚೈಸಿಗೆ ಡು ಪ್ಲೆಸಿಸ್‌! :

ಇದೇ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ಒಡೆತನದ ಜೊಹಾನ್ಸ್‌ಬರ್ಗ್‌ ಫ್ರಾಂಚೈಸಿ ಫಾ ಡು ಪ್ಲೆಸಿಸ್‌ ಅವರನ್ನು ಸೆಳೆದುಕೊಂಡಿದೆ. ಕಳೆದ ಐಪಿಎಲ್‌ ಹರಾಜಿನ ವೇಳೆ ಡು ಪ್ಲೆಸಿಸ್‌ ಅವರನ್ನು ಚೆನ್ನೈ ಉಳಿಸಿಕೊಂಡಿರಲಿಲ್ಲ. ಚೆನ್ನೈ ತಂಡದ ಮತ್ತೋರ್ವ ಆಟಗಾರ ಮೊಯಿನ್‌ ಅಲಿ ಅವರಿಗೂ ಜೊಹಾನ್‌ಬರ್ಗ್‌ ಫ್ರಾಂಚೈಸಿ ಬಲೆ ಬೀಸುವ ಸಾಧ್ಯತೆ ಇದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next