Advertisement

ದಿಲ್ಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಎಲ್‌ಜಿ ವರದಿ ಸಲ್ಲಿಕೆ

03:44 PM Feb 21, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪದ ಕುರಿತಾಗಿ ದಿಲ್ಲಿ ಲೆ| ಗವರ್ನರ್‌ ಅನಿಲ್‌ ಬೈಜಾಲ್‌ ಅವರು ಸಿದ್ಧಪಡಿಸಿರುವ ವರದಿಯು ಗೃಹ ಸಚಿವಾಲಯವನ್ನು ಇಂದು ಬುಧವಾರ ತಲುಪಿರುವುದಾಗಿ ತಿಳಿದು ಬಂದಿದೆ. 

Advertisement

ದಿಲ್ಲಿ ಎಲ್‌ಜಿ ಅವರ ವರದಿಯನ್ನು ಸ್ವೀಕರಿಸಲಾಗಿದೆ; ಅದೀಗ ಪರಿಶೀಲನೆಯಲ್ಲಿದೆ. ಈ ಪ್ರಕರಣದ ಕ್ರಿಮಿನಲ್‌ ವಿಷಯವನ್ನು ದಿಲ್ಲಿ ಪೊಲೀಸರು ಕೈಗೆತ್ತಿಕೊಳ್ಳುತ್ತಾರೆ; ಗೃಹ ಸಚಿವಾಲಯವು ಇದರಲ್ಲಿನ ಆಡಳಿತಾತ್ಮಕ ವಿಷಯಗಳನ್ನು ಪರಿಶೀಲಿಸಲಿದೆ; ಸರಕಾರಿ ಅಧಿಕಾರಿಯೊಂದಿಗಿನ ಅನುಚಿತ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಗೃಸ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. 

ದಿಲ್ಲಿ ಸರಕಾರದ ರಾಜಕೀಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಶಾಹಿ ನಡುವಿನ ಕ್ರಿಯಾ ಬಾಂಧವ್ಯವನ್ನು ಕೂಡ ಸಚಿವಾಲಯ ಪರಿಶೀಲಿಸಲಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next