Advertisement

ತೂತುಕುಡಿ ಹಿಂಸೆ, ಸಾವು: ಪೂರ್ತಿ ವಿವರ ಕೇಳಿದ ಕೇಂದ್ರ ಸರಕಾರ

12:21 PM May 23, 2018 | udayavani editorial |

ಹೊಸದಿಲ್ಲಿ : ತಮಿಳುನಾಡಿನ ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟೆರಲೈಟ್‌ ಕೈಗಾರಿಕಾ ಘಟಕವನ್ನು ಮುಚ್ಚಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ಒಂಬತ್ತು  ಮಂದಿ ಪೊಲೀಸ್‌ ಗುಂಡಿಗೆ ಅಸುನೀಗಿರುವ ಘಟನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ತನಗೆ ನೀಡುವಂತೆ ಕೇಂದ್ರ ಸರಕಾರ ಇಂದು ತಮಿಳು ಸರಕಾರವನ್ನು ಕೋರಿದೆ.

Advertisement

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಮಿಳು ನಾಡು ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. 

ತೂತುಕುಡಿಯಲ್ಲಿನ ಪ್ರತಿಭಟನೆ ಕಳೆದ ಮೂರು ತಿಂಗಳಿಂದಲೂ ನಡೆಯುತ್ತಿತ್ತು. ಆದರೆ ನಿನ್ನೆ ಮಂಗಳವಾರ ಸುಮಾರು 5,000 ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು ಹಿಂಸೆಗಿಳಿದು ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲೆಸೆದು ಧಾಂದಲೆ ನಡೆಸಿದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್‌ ನಡೆಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next