ನವದೆಹಲಿ: ದೆಹಲಿ ಸರ್ಕಾರದ 2023-24ನೇ ಸಾಲಿನ ಬಜೆಟ್ಗೆ ಕೇಂದ್ರ ಗೃಹ ಸಚಿವಾಲಯ ಕೊನೆಗೂ ಮಂಗಳವಾರ ಒಪ್ಪಿಗೆ ನೀಡಿದೆ.
ಆಮ್ ಆದ್ಮಿ ಪಕ್ಷ ರಾಜಕೀಯ ಜಾಹೀರಾತುಗಳಿಗಾಗಿ ಮಾಡಿದ್ದ ವೆಚ್ಚದ ಬಗ್ಗೆ ಕೇಂದ್ರ ಸರ್ಕಾರ ಪ್ರಮುಖವಾಗಿ ಆಕ್ಷೇಪ ಮಾಡಿತ್ತು.
ಜತೆಗೆ ಮೂಲ ಸೌಕರ್ಯಗಳಿಗೆ ಕಡಿಮೆ ಮೊತ್ತ ತೆಗೆದು ಇರಿಸಿದ್ದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಾದ ಬಳಿಕ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕೇಂದ್ರ ಸರ್ಕಾರದ ಕ್ರಮ ಅಸಾಂವಿಧಾನಿಕ.
ಮೂಲ ಸೌಕರ್ಯಕ್ಕೆ 20 ಸಾವಿರ ಕೋಟಿ ರೂ., ಜಾಹೀರಾತು ವೆಚಕ್ಕೆ 500 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದ್ದಾರೆ. 500 ಕೋಟಿ ರೂ. ದೊಡ್ಡದೋ ಅಥವಾ 20 ಸಾವಿರ ಕೋಟಿ ಮೊತ್ತವೋ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Related Articles