ಮೆಕ್ಸಿಕೋ: ಜನಪ್ರಿಯ ವಿಡಿಯೋ ಶೇರಿಂಗ್ ಆ್ಯಪ್ ಟಿಕ್ ಟಾಕ್ ನಲ್ಲಿ ಭಯಾನಕ ಚಾಲೆಂಜ್ ವೊಂದು ವೈರಲ್ ಆಗುತ್ತಿದೆ. ಮಾತ್ರೆಗಳನ್ನು ತೆಗೆದುಕೊಂಡ ಬಳಿಕ ನಿದ್ರೆ ಮಾಡದೇ ಹಾಗೆಯೇ ಇದ್ದು, ಕೊನೆಯದಾಗಿ ನಿದ್ರಿಸುವವನು ಗೆಲ್ಲುತ್ತಾನೆ ಎನ್ನುವ ಚಾಲೆಂಜ್ ವೈರಲ್ ಆಗಿದೆ.
ಎಲ್ಲೆಡೆ ಈ ಭಯಾನಕ ಚಾಲೆಂಜ್ ಹಬ್ಬುತ್ತಿದ್ದು, ಮೆಕ್ಸಿಕೋ ನಗರದ ಶಾಲೆಯೊಂದರಲ್ಲಿ ಅಮಲೇರಿದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಅಧಿಕಾರಿಗಳು ಇದರ ಹಿಂದಿನ ಕಾರಣವನ್ನು ಪರಿಶೀಲಿಸಿದಾಗ, ಇದು ಟಿಕ್ ಟಾಕ್ ನಲ್ಲಿ ಚಾಲೇಂಜ್ ಪರಿಣಾಮ ಎದ್ದು ತಿಳಿದು ಬಂದಿದೆ.
ಪೀಡ್ಸ್ ರೋಗಕ್ಕೆ ಹಾಗೂ ಏಕಾಏಕಿ ಉಂಟಾಗುವ ಆತಂಕವನ್ನು ದೂರ ಮಾಡಲು ನೀಡುವ ಮಾತ್ರೆಯನ್ನು ತೆಗೆದುಕೊಳ್ಳುವ ಸವಾಲನ್ನು ಒಬ್ಬರು ಹಾಕುತ್ತಾರೆ. ಮಾತ್ರೆಯನ್ನು ಸೇವಿಸಿದ ಬಳಿಕ ನಿದ್ರೆ ಬಂದು ಅಮಲೇರುತ್ತದೆ ಹೀಗೆ ಅಮಲು ಏರಿದಾಗ ಯಾರು ಕೊನೆಯದಾಗಿ ನಿದ್ರೆ ಮಾಡುತ್ತಾರೋ ಅವರು ಸವಾಲಿನಲ್ಲಿ ಗೆಲ್ಲುತ್ತಾರೆ.
ಇದುವರೆಗೆ ಕೆಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಅಪಾಯಕಾರಿ. ಎಲ್ಲೆಡೆ ಈ ಸವಾಲು ಹಬ್ಬುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವರು ಇದು ಅಪಾಯಕಾರಿ ಸವಾಲೆಂದು ಇದರ ಕುರಿತು ವಿಡಿಯೋ ಮಾಡಿದ್ದಾರೆ. ಚಿಲಿಯಲ್ಲಿಯೂ ಇತ್ತೀಚೆಗೆ ಈ ಟಿಕ್ ಟಾಕ್ ಚಾಲೆಂಜ್ ಕಂಡು ಬಂದಿತ್ತು.