Advertisement
ಪ್ರವಾಸಿ ಮಂದಿರದಲ್ಲಿ ಸಿಐಡಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ಪ್ರತ್ಯೇಕವಾಗಿ ಇವರಿಬ್ಬರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಮುಲಾಲಿ ಹಾಗೂ ಅನುಪಮಾ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ. 2 ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಕಲೆಹಾಕಲಾಗಿದೆ ಎಂದು ತಿಳಿದುಬಂದಿದೆ.
ಸಿಐಡಿ ವಿಚಾರಣೆ ಎದುರಿಸುವಂತೆ ಮಾಡುವ ಮೂಲಕ ರಾಜ್ಯ ಸರ್ಕಾರ ದೊಡ್ಡದೊಂದು ಬಹುಮಾನ ನೀಡಿದೆ ಎಂದು ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ವ್ಯಂಗ್ಯವಾಡಿದರು.
Related Articles
Advertisement
ಮೇಟಿ ಪ್ರಕರಣದಲ್ಲಿ ಬ್ಲಾಕ್ ಮೇಲ್ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಸಿಡಿ ಅಂದ ಕೂಡಲೇ ಅನುಪಮಾ ಶೆಣೈ ಹೆಸರು ಬಂದರೆ ಹೇಗೆ? ಯಾರೋ ಮಾಡಿದ ಕೆಲಸಕ್ಕೆ ನನ್ನನ್ನು ವಿಚಾರಣೆಗೆ ಕರೆದರೆ ಹೇಗೆ ಎಂದು ಪ್ರಶ್ನಿಸಿದರು..