Advertisement

ಅಡುಗೆ ಮನೆ: ಬಾಯಲ್ಲಿ ನೀರೂರಿಸುವ ಮೇಥಿ(ಮೆಂತ್ಯ ಸೊಪ್ಪು) ಪರೋಟ ಸರಳ ವಿಧಾನ

09:49 AM Mar 20, 2020 | Sriram |

ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನ್ಸಸಿಗೆ ಬರುವುದು ಆಲೂ ಪರೋಟ, ಗೋಬಿ ಪರೋಟ, ಪನ್ನೀರ್ ಪರೋಟ ಹೀಗೆ ವಿವಿಧ ರೀತಿಯಲ್ಲಿ ಪರೋಟವನ್ನು ನೀವು ತಿಂದಿರಬಹುದು ಆದರೆ ಮೇಥಿ(ಮೆಂತ್ಯ ಸೊಪ್ಪು)ಪರೋಟದ ರುಚಿಯನ್ನು ಸವಿದು ನೋಡಿದ್ದಿರಾ ? ಇಲ್ಲವೆಂದರೆ ಅತೀ ಸರಳ ವಿಧಾನದಲ್ಲಿ ಮೇಥಿ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ…

Advertisement

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು 3 ಕಪ್, ಕಡಲೆ ಹಿಟ್ಟು 1 ಕಪ್, ಮೆಂತ್ಯೆ ಸೊಪ್ಪು 2 ಕಟ್ಟು, ಜೀರಿಗೆ ಪುಡಿ 1ಚಮಚ, ಎಣ್ಣೆ 100 ಗ್ರಾಂ, ಖಾರದ ಪುಡಿ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಗರಂ ಮಸಾಲ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:
ಗೋಧಿ ಹಿಟ್ಟನ್ನು ಜರಡಿ ಹಿಡಿದು ಇಟ್ಟುಕೊಳ್ಳಿ , ತದನಂತರ ಮೆಂತ್ಯ ಸೊಪ್ಪನ್ನು ನೀರಿನಲ್ಲಿ ತೊಳೆದು ಸೊಪ್ಪನ್ನು ಬಿಡಿಸಿಕೊಳ್ಳಿ. ನಂತರ ಸಣ್ಣಗೆ ಕಟ್ಟು ಮಾಡಿಕೊಳ್ಳಿ.ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೆಂತ್ಯ ಸೊಪ್ಪು, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಕಡಲೆ ಹಿಟ್ಟು , ಅರಿಶಿನ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ.

ಈ ಮಿಶ್ರಣಕ್ಕೆ 6 ಚಮಚ ಎಣ್ಣೆ ಸೇರಿಸಿ. ಈಗ ನೀರಿನಿಂದ ಚಪಾತಿ ಹಿಟ್ಟಿನಂತೆ ಕಲಸಿ. ಸ್ವಲ್ಪ ಸಮಯ ಹಿಟ್ಟನ್ನು ಹಾಗೆಯೇ ಬಿಡಬೇಕು. ನಂತರ ಹಿಟ್ಟನ್ನು ನಿಮಗೆ ಬೇಕಾದ ಆಕಾರ ಮಾಡಿಕೊಂಡು ತೆಳ್ಳಗೆ ಲಟ್ಟಿಸಿ. ಲಟ್ಟಿಸುವಾಗಲೇ ಎಣ್ಣೆಯನ್ನು ಉಪಯೋಗಿಸಬಹುದು. ಕಾದ ತವಾದ ಮೇಲೆ ಹಾಕಿಕೊಂಡು ಎಣ್ಣೆಯಿಂದ ಬೇಯಿಸಿರಿ. ಪರೋಟ ಕೆಂಪಗಾದ ಮೇಲೆ ತವಾದ ಮೇಲಿಂದ ತೆಗೆಯಿರಿ. ಬಿಸಿಯಿರುವಾಗಲೇ ತಿನ್ನಲು ಬಲು ರುಚಿಯಾಗಿರುತ್ತದೆ. ಮೇಥಿ(ಮೆಂತ್ಯ ಸೊಪ್ಪು) ಪರೋಟವನ್ನು ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.

ಕೊತ್ತಂಬರಿ ಸೊಪ್ಪಿನ ಚಟ್ನಿ:
ಬೇಕಾಗುವ ಸಾಮಗ್ರಿಗಳು
ಪುದೀನಾ ಸೊಪ್ಪು 1 ಕಟ್ಟು, ಕೊತ್ತಂಬರಿ ಸೊಪ್ಪು 1 ಕಟ್ಟು, ತೆಂಗಿನ ತುರಿ 2 ಚಮಚ, ನಿಂಬೆ ಹಣ್ಣು 1, ಹಸಿಮೆಣಸಿನ ಕಾಯಿ 5, ರುಚಿಗೆ ತಕ್ಕಷ್ಟು ಉಪ್ಪು.

Advertisement

ತಯಾರಿಸುವ ವಿಧಾನ
ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪನ್ನು ನೀರಿನಲ್ಲಿ ತೊಳೆದು ಬಿಡಿಸಿಕೊಳ್ಳಿ. ತೆಂಗಿನ ತುರಿ, ಹಸಿಮೆಣಸಿನಕಾಯಿ, ನಿಂಬೆ ರಸ, ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಿರಿ. ನೀರನ್ನು ಬಳಸದೆ ರುಬ್ಬಿರಿ. ಈ ಚಟ್ನಿಯು ಬೇಸಿಗೆಯಲ್ಲಿ ಸವಿದರೆ ತುಂಬಾ ತಂಪು.

Advertisement

Udayavani is now on Telegram. Click here to join our channel and stay updated with the latest news.

Next