ವಾಷಿಂಗ್ಟನ್: ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮಾತೃಸಂಸ್ಥೆ ಮೆಟಾ ಮುಂದಾಗಿದೆ. ವೆಚ್ಚ ಕಡಿತದ ಭಾಗವಾಗಿ ಎರಡನೇ ಹಂತದಲ್ಲಿ ಒಟ್ಟು 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮೆಟಾ ಸಂಸ್ಥೆ ಮಂಗಳವಾರ ಘೋಷಿಸಿದೆ.
ಅಲ್ಲದೇ ಹೊಸದಾಗಿ 5,000 ಉದ್ಯೋಗಿಗಳ ನೇಮಕ ಮಾಡಬೇಕೆಂಬ ಯೋಜನೆಯನ್ನು ಸಹ ಕೈಬಿಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಳೆದ ನವೆಂಬರ್‌ನಲ್ಲಿ ಟೆಕ್ ದೈತ್ಯ ಕಂಪನಿ ಮೆಟಾ, ಒಟ್ಟು 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಅವರಿಗೆ ಪರಿಹಾರವಾಗಿ ಮೂರು ತಿಂಗಳ ಸಂಬಳ ಹಾಗೂ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸಿತ್ತು. ಕೊರೊನಾ ನಂತರದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಬಡ್ಡಿ ದರ ಏರಿಕೆ ಹಾಗೂ ಕಂಪನಿಯನ್ನು ಸುಸ್ಥಿತಿಯಲ್ಲಿಡುವ ಕಾರಣದಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮೆಟಾ ಹೇಳಿದೆ.