Advertisement

ಪಿಎಸ್‌ಜಿ ಕ್ಲಬ್‌ನಲ್ಲಿ ಮೆಸ್ಸಿ ಯುಗ

09:36 PM Aug 11, 2021 | Team Udayavani |

ಬ್ಯೂನಸ್‌ ಐರಿಸ್‌: ಬಾರ್ಸಿಲೋನಾ ಕ್ಲಬ್‌ ಜತೆಗಿನ 21 ವರ್ಷಗಳ ಸುದೀರ್ಘ‌ ನಂಟನ್ನು ಇತ್ತೀಚೆಗಷ್ಟೇ ಕೊನೆಗೊಳಿಸಿದ್ದ ಫ‌ುಟ್‌ಬಾಲ್‌ ಲೆಜೆಂಡ್‌ ಲಿಯೊನೆಲ್‌ ಮೆಸ್ಸಿ ಇದೀಗ ಪ್ಯಾರಿಸ್‌ ಸೈಂಟ್‌-ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ಗ ಸೇರ್ಪಡೆಗೊಂಡಿದ್ದಾರೆ.

Advertisement

ಎರಡು ವರ್ಷಗಳ ಅವಧಿಯ ಒಪ್ಪಂದ ಇದಾಗಿದೆ. ಇದರೊಂದಿಗೆ ಪಿಎಸ್‌ಜಿನಲ್ಲಿ ಮೆಸ್ಸಿಯ ಹೊಸ ಯುಗಾರಂಭವಾಗಿದೆ.

34 ವರ್ಷದ ಆರ್ಜೆಂಟೀನಾದ ಸ್ಟಾರ್‌ ಆಟಗಾರ ಮೆಸ್ಸಿ ಎರಡು ವರ್ಷಗಳ ಅವಧಿಗೆ ನಮ್ಮ ಕ್ಲಬ್‌ ಪರ ಆಡುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ಪಿಎಸ್‌ಜಿಯ ಅಧ್ಯಕ್ಷ ನಾಸೀರ್‌ ಅಲ್‌ ಖಲೀಫಿ ತಿಳಿಸಿದ್ದಾರೆ.

ರೋಮಾಂಚನವಾಗುತ್ತಿದೆ…

ಪಿಎಸ್‌ಜಿಯಲ್ಲಿ ನನ್ನ ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭಿಸಲು ರೋಮಾಂಚನವಾಗುತ್ತಿದೆ. ಕ್ಲಬ್‌ನ ಪ್ರತಿಯೊಂದು ಅಂಶವೂ ನನ್ನ ಫ‌ುಟ್‌ಬಾಲ್‌ ಮಹತ್ವಾಕಾಂಕ್ಷೆಗೆ ಸರಿ ಹೊಂದುತ್ತದೆ. ಈ ತಂಡ ಮತ್ತು ಕೋಚಿಂಗ್‌ ಸಿಬಂದಿ ಎಷ್ಟು ಪ್ರತಿಭಾವಂತರು ಎನ್ನುವುದನ್ನು ನಾನು ಬಲ್ಲೆ. ಪಾರ್ಕ್‌ ಡೆಸ್‌ ಪ್ರಿನ್ಸೆಸ್‌ನಲ್ಲಿ ಮೈದಾನಕ್ಕೆ ಇಳಿಯುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಮೆಸ್ಸಿ ಹೇಳಿ¨ªಾರೆ. ಆದರೆ ಮೆಸ್ಸಿ ವೇತನ ಬಗ್ಗೆ ಯಾವ ಮಾಹಿತಿಯನ್ನೂ ಕ್ಲಬ್‌ ಬಹಿರಂಗಪಡಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next