ದಾವಣಗೆರೆ: ಯುವತಿಗೆ ಅಶ್ಲೀಲ ಸಂದೇಶ ಕಳಿಸಿದ್ದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದ ಯುವಕನಿಗೆ ಯುವತಿಯ ಕಡೆಯವರು ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಅತ್ತಿಗೆರೆ ಗ್ರಾಮದ ಯುವಕ ಗಣೇಶ್ ಎಂಬಾತ ಅದೇ ಊರಿನ ಯುವತಿಯೊಬ್ಬಳಿಗೆ ಇನ್ ಸ್ಟಾಗ್ರಾಂನಲ್ಲಿ ‘ಹಾಯ್’ ಮೆಸೇಜ್ ಹಾಕಿದ್ದ. ನಂತರ ಯುವತಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಅದನ್ನು ಫೇಸ್ಬುಕ್ನಲ್ಲಿ ಸಹ ಹಾಕಿದ್ದ. ಈ ವಿಚಾರ ತಿಳಿದ ಯುವತಿ ಕುಟುಂಬಸ್ಥರು ಯುವಕನಿಗೆ ಪ್ರಶ್ನಿಸಿದ್ದಾರೆ.
ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಲ್ಲದೇ ಅಶ್ಲೀಲವಾಗಿ ಸಂದೇಶ ಕಳಿಸುವ ಮೂಲಕ ಯುವತಿಗೆ ಕಾಟ ಕೊಡುತ್ತಿದ್ದ. ವಾಟ್ಸಪ್ನಲ್ಲಿ ಮೆಸೇಜ್ ಮಾಡುವುದು, ಫೇಸ್ಬುಕ್ನಲ್ಲಿ ಯುವತಿಯ ಫೋಟೋ ಹಾಕಿ, ಕವನ ಬರೆಯುವುದನ್ನು ಮಾಡುತ್ತಿದ್ದ ಯುವಕನ ಚೇಷ್ಟೆಗಳ ಬಗ್ಗೆ ತಿಳಿದ ಯುವತಿ ಕುಟುಂಬಸ್ಥರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ:ತ್ರಿಪುರದಲ್ಲಿ ಸಿಎಂ ಬದಲಾವಣೆ; ಬಿಜೆಪಿ ಶಾಸಕರಲ್ಲೇ ಅಸಮಾಧಾನ; ಜಗಳದ ವಿಡಿಯೋ ವೈರಲ್
Related Articles
ಥಳಿಸುತ್ತಿದ್ದ ವೇಳೆ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ‘’ನಮ್ಮ ಮನೆಯ ಯುವತಿ ಅಷ್ಟೇ ಅಲ್ಲ, ಯಾರ ಮನೆಯ ಹೆಣ್ಣು ಮಕ್ಕಳಿಗೂ ನಿನ್ನಂತಹವರಿಂದ ಕಾಟ ಆಗಬಾರದು ‘’ಎಂದು ಗ್ರಾಮದ ದೇವಸ್ಥಾನದ ಬಳಿ ಗಣೇಶನನ್ನು ಕಟ್ಟಿ ಹಾಕಿ, ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಅರೆಬೆತ್ತಲೆ ಮಾಡಿ, ಗ್ರಾಮದಲ್ಲಿ ಸುತ್ತಾಡಿಸಿದ್ದಾರೆ. ಯುವಕನ ಕಾಟದಿಂದ ಬೇಸತ್ತಿದ್ದ ಯುವತಿ ಕುಟುಂಬಸ್ಥರು, ಗ್ರಾಮಸ್ಥರು ಕಾಟ ಕೊಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ