Advertisement
1. ಅಯ್ಯರ್ ಮೆಸ್: ಕಳೆದ 40 ವರ್ಷಗಳಿಂದ ತಮಿಳು ಬ್ರಾಹ್ಮಣ ಶೈಲಿಯ ಬಾಳೆ ಎಲೆ ಊಟವನ್ನು ಬಡಿಸುವಲ್ಲಿ ನಿರತವಾಗಿರುವ ಮೆಸ್‌ಗೆ ಇದು. ಮನೆಯಲ್ಲಿ ಕುಳಿತು ಊಟ ಮಾಡಿದಂತೆಯೇ ಇರುತ್ತೆ ಇಲ್ಲಿನ ವಾತಾವರಣ.ಎಲ್ಲಿದೆ?: ದೇವಿ ಪ್ರಸಾದ್ ಹೋಂ ಅಪ್ಲಯನ್ಸ್, 7ನೇ ಕ್ರಾಸ್, ವೆಸ್ಟ್ ಪಾರ್ಕ್, ಮಲ್ಲೇಶ್ವರಂ
ಸಮಯ: ಬೆಳಗ್ಗೆ 11.30- ಮಧ್ಯಾಹ್ನ 3, ಸಂಜೆ 7- ರಾತ್ರಿ 9
ಸಂಪರ್ಕ: ಮೊ. 9886078290
ಸಮಯ: ಬೆಳಗ್ಗೆ 8- 10, ಮಧ್ಯಾಹ್ನ 12.30- 3.30, ಸಂಜೆ 7.30- ರಾತ್ರಿ 9.30
ಸಂಪರ್ಕ: ಮೊ. 9845252113
Related Articles
Advertisement
ಎಲ್ಲಿ?: ಮರಿಯಪ್ಪ ಬಿಲ್ಡಿಂಗ್, ಐಇಟಿಇ ಎದುರು, ಬಳ್ಳಾರಿ ಮುಖ್ಯರಸ್ತೆ, ಆರ್.ಟಿ. ನಗರಸಮಯ: ಮ. 12- ರಾ. 11
ಫೋ: 080- 23633436 4. ನೆಲ್ಲೂರ್ ಮೆಸ್: ಆಂಧ್ರ ಶೈಲಿಯ ವೆಜ್ ಮತ್ತು ನಾನ್‌ವೆಜ್ ಆಹಾರ ಇಲ್ಲಿ ಸಿಗುತ್ತೆ. ಚಿಕನ್ ಬಿರಿಯಾನಿ ಮತ್ತು ಎಗ್ ಬುರ್ಜಿ ಈ ಮೆಸ್‌ನ ವಿಶೇಷತೆ. ತುಸು ಸ್ಪೈಸಿಯೇ ಆದರೂ ಚಪ್ಪರಿಸುವಂಥ ಖಾದ್ಯಕ್ಕೆ ಈ ಮೆಸ್ ಹೆಸರುವಾಸಿ. ಎಲ್ಲಿ?: ಹೊಂಡಾ ಶೋರೂಂ ಪಕ್ಕ, ಹೊರಮಾವು ಸಿಗ್ನಲ್, ಬಾಣಸವಾಡಿ
ಸಮಯ: ಮಧ್ಯಾಹ್ನ 1- ಸಂಜೆ 4. ಸಂಜೆ 7- ರಾತ್ರಿ 10
ಫೋ: 9243119927 5. ಸಂಗಂ ಮೆಸ್: ಕೇರಳ ಶೈಲಿಯ ಆಹಾರಕ್ಕಾಗಿ ಈ ಮೆಸ್‌ಗೆ ಭೇಟಿ ನೀಡಬಹುದು. ಅಪ್ಪಂ, ಕಲ್ಲುಮಕ್ಕ, ಕಪ್ಪ ಬಿರಿಯಾನಿ ಈ ಮೆಸ್‌ನ ಸ್ಪೆಷಾಲಿಟಿ. ತೆಂಗಿನಕಾಯಿಯಿಂದಲೇ ಮಾಡಿದಂಥ ಖಾದ್ಯಗಳನ್ನು ಇಲ್ಲಿ ಸವಿಯಬಹುದು. ಎಲ್ಲಿದೆ?: 3ನೇ ಕ್ರಾಸ್, ಚಿನ್ನಪ್ಪ ಲೇಔಟ್, ಕಮ್ಮನಹಳ್ಳಿ ಮುಖ್ಯರಸ್ತೆ
ಸಮಯ: ಬೆಳಗ್ಗೆ 8- ರಾತ್ರಿ 10.30
ಫೋ: 080- 65651651 6. ಅನ್ನಪೂರ್ಣ ಮೆಸ್: ಉತ್ತರ ಭಾರತೀಯರು ಹೆಚ್ಚು ಇಷ್ಟಪಡುವ ಜಾಗವಿದು. ಪುಲಾವ್, ಪಾವ್ ಭಾಜಿ, ಪರಾಠಾ ಎಲ್ಲದರಲ್ಲೂ ಉತ್ತರ ಭಾರತೀಯ ಅಡುಗೆ ಮನೆಯ ರುಚಿಯಿದೆ. ಜೊತೆಗೆ ಚೈನೀಸ್ ಖಾದ್ಯಗಳೂ ಇಲ್ಲಿ ಸಿಗುತ್ತವೆ. ಎಲ್ಲಿದೆ?: 1ನೇ ಕ್ರಾಸ್, 5ನೇ ಬ್ಲಾಕ್, ಕೆ.ಎಚ್.ಬಿ. ಕಾಲೊನಿ, ಕೋರಮಂಗಲ
ಸಮಯ: ಬೆಳಗ್ಗೆ 10.30- ಸಂ. 4, ರಾ. 7- ರಾತ್ರಿ 11 7. ಬೆಂಗಾಲಿ ಮೆಸ್: ಹೆಸರೇ ಹೇಳುವಂತೆ ಈ ಮೆಸ್ ಬಂಗಾಳಿ ಸ್ವಾದದ ಖಾದ್ಯಗಳಿಗೆ ಹೆಸರುವಾಸಿ. ಗ್ರಾಹಕರ ಜೇಬಿಗೂ ಹೊರೆಯಾಗದಂತೆ ಬೆಲೆ ನಿಗದಿ ಪಡಿಸಲಾಗಿದೆ. ರಸಮುಲಾಯಿಯಂಥ ಬಂಗಾಳಿ ಸಿಹಿಯನ್ನೂ ಇಲ್ಲಿ ಸವಿಯಬಹುದು. ಎಲ್ಲಿ?: 5ನೇ ಕ್ರಾಸ್, 5ನೇ ಬ್ಲಾಕ್, ಕೆ.ಎಚ್.ಬಿ ಕಾಲನಿ, ಕೋರಮಂಗಲ
ಸಮಯ: ಬೆಳಿಗ್ಗೆ 11.30- ಮಧ್ಯಾಹ್ನ 3.30, ಸಂಜೆ 6.30- ರಾತ್ರಿ 10.30
ಮೊ.: 8971812966 8. ಶ್ರೀವೆಂಕಟೇಶ್ವರ ಮೆಸ್: ಉಡುಪಿ ಮೆಸ್ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರ ಮೆಸ್ ಶ್ರೀನಗರದ ಸುತ್ತಮುತ್ತಲೆಲ್ಲಾ ಹೆಸರುವಾಸಿ. ಚಪಾತಿ ಊಟಕ್ಕೆ 50 ರೂ. ಅನ್ನ ಸಾಂಬಾರ್‌ಗೆ 25ರೂ. ಇಲ್ಲಿನ ಮೆನು ತುಂಬಾ ಸಿಂಪಲ್, ಆದರೆ ಸ್ವಾದಿಷ್ಟಕರ ಮತ್ತು ಆರೋಗ್ಯಕರ. ಆ ದಾರಿಯಲ್ಲಿ ಕಾರ್ಯಾಚರಿಸುವ ಬಿ.ಎಂ.ಟಿ.ಸಿ ಬಸ್ ಸಿಬ್ಬಂದಿಗಳು ಬಸ್ ನಿಲ್ಲಿಸಿಕೊಂಡು ಇಲ್ಲಿಂದ ಊಟವನ್ನು ಪಾರ್ಸೆಲ್ ಮಾಡಿಸಿ ಕೊಂಡೊಯ್ಯುತ್ತಾರೆ ಎನ್ನುವುದು ಈ ಮೆಸ್‌ನ ಹೆಗ್ಗಳಿಕೆ. ಎಲ್ಲಿ?: ಪಿ..ಇ.ಎಸ್ ಕಾಲೇಜು ಬಳಿ, ಆವಲಹಳ್ಳಿ 50 ಅಡಿ ರಸ್ತೆ, ಶ್ರೀನಗರ
ಸಮಯ: ಸಂಜೆ 7- ರಾತ್ರಿ 11.30