ಕನಕಪುರ: ರಾಜಕೀಯ ಪಕ್ಷಗಳು ಎಂಇ ಎಸ್ ಪುಂಡಾಟಿಕೆಯನ್ನು ರಾಜ ಕೀಯ ವಾಗಿ ಬಳಸಿಕೊಳ್ಳಲು ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿವೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯ ಮುಖ್ಯ ಸಲಹೆಗಾರ ಪ್ರಕಾಶ್ ರೈ ಕಿಡಿಕಾರಿದರು.
ಜಯಕರ್ನಾಟಕ ಸಂಘಟನೆ ವತಿಯಿಂದ ನಾಡ ಧ್ವಜ ದಹಿಸಿದ ಎಂಇಎಸ್ ವಿರುದ್ಧ ತಾಲೂಕು ಕಚೇರಿ ಆವರಣದಲ್ಲಿಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎಂಇಎಸ್ ಪುಂಡಾಟಿಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತಿದೆ ಆಡಳಿತ ರೂಡ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂಪ್ರಾದೇಶಿಕ ಪಕ್ಷಗಳಿಗೆ ನೈತಿಕತೆ ಇದ್ದಿದ್ದರೆಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ಎಂಇ ಎಸ್ ಪುಂಡಾಟಿಕೆಗೆ ಮೂಗುದಾರ ಹಾಕಬಹುದಿತ್ತು. ಆದರೆ ಮೂರು ಪಕ್ಷಗಳು ಎಂಇಎಸ್ ಪುಂಡಾಟಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ವ್ಯವಸ್ಥಿತಪಿತೂರಿ ಮಾಡುತ್ತಿವೆ. ಒಂದು ಕಡೆ ಕೊರೊನಾದಿಂದ ದೇಶ ತತ್ತರಿಸುತ್ತಿದೆ ಮತ್ತೂಂದು ಕಡೆ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಇಂತಹ ಸಂದರ್ಭದಲ್ಲಿ ಪುಂಡಾಟಿಕೆ ಮಾಡುತ್ತಿರುವ ಎಂಇಂಎಸ್ ಮತ್ತು ಶಿವಸೇನೆ ಸಂಘಟನೆ ಮಟ್ಟಹಾಕಲುಆಗದ ಸರ್ಕಾರಗಳು ನಮ್ಮ ನಮ್ಮ ದೇಶ ದಲ್ಲಿವೆ ಎಂದರೆ ಅದು ನಮ್ಮ ದುರ್ದೈವ ಎಂದು ಹೇಳಿದರು.
ನಾಡಿನ ಎಲ್ಲಾ ಜನ ಪಕ್ಷತೀತವಾಗಿ ಒಗ್ಗಟ್ಟಾಗಿ ಕನ್ನಡ ಭಾಷೆ. ನಾಡು-ನುಡಿ ನೆಲ-ಜಲ ರಕ್ಷಣೆ ಮಾಡ ಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.ಸರ್ಕಾರ ಎಂಇಎಸ್ ಪುಂಡರ ವಿರುದ್ಧಸೂಕ್ತ ಶಿಸ್ತುಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆಎಂದು ಎಚ್ಚರಿಕೆ ನೀಡಿದರು. ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಪಿ. ಕೃಷ್ಣಪ್ಪ, ಜಿಲ್ಲಾಧ್ಯಕ್ಷರವಿ, ಜಿಲ್ಲಾ ಕಾರ್ಯಾ ಧ್ಯಕ್ಷ ಜಿ.ಪಿ. ವೀರೇಶ್, ಜಿಲ್ಲಾ ಮುಖಂಡ ಮಿಲ್ಟ್ರಿ ರಾಮಣ್ಣ,ನಿಯೋಜಿತ ತಾಲೂಕು ಅಧ್ಯಕ್ಷ ರಾಮಮೂರ್ತಿ, ಜಿಮ್ ಅರುಣ, ದೀಪು, ಕೋಟೆ ರೆಡ್ಡಿ, ಕೆ.ಆರ್.ಚಂದ್ರ ಶೇಖರಯ್ಯ, ಮುತ್ತುರಾಜು ಉಪಸ್ಥಿತರಿದ್ದರು.