Advertisement

Air India ಜತೆ ವಿಲೀನ: ಸೆ.3ರ ಬಳಿಕ ವಿಸ್ತಾರ ಟಿಕೆಟ್‌ ಬುಕ್ಕಿಂಗ್‌ ಇಲ್ಲ!

02:05 AM Aug 31, 2024 | |

ಹೊಸದಿಲ್ಲಿ: ನ.12ರಂದು ಟಾಟಾ ಒಡೆತನದ ಏರ್‌ ಇಂಡಿಯಾ ಮತ್ತು ಸಿಂಗಾಪುರ್‌ ಏರ್‌ಲೈನ್ಸ್‌ನ ವಿಸ್ತಾರ ವಿಲೀನ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಈ ಹಿನ್ನೆಲೆ ಯಲ್ಲಿ ಸೆ.5ರಿಂದಲೇ ವಿಸ್ತಾರ ವಿಮಾನ ಬುಕ್ಕಿಂಗ್‌ ಸೌಲಭ್ಯ ರದ್ದುಪಡಿಸಲಾಗುತ್ತಿದೆ. ಉಭಯ ಸಂಸ್ಥೆಗಳ ವಿಲೀನದ ಭಾಗವಾಗಿ ವಿದೇಶಿ ನೇರ ಹೂಡಿಕೆ ಸಂಬಂಧ ಭಾರತ ಸರಕಾರ ಅನುಮೋದನೆ ನೀಡಿದೆ ಎಂದು ಸಿಂಗಾಪುರ್‌ ಏರ್‌ಲೈನ್ಸ್‌ ಘೋಷಿಸಿದೆ. ನ.12 ಅಥವಾ ಅನಂತರದ ದಿನಗಳಲ್ಲಿನ ಪ್ರಯಾಣಕ್ಕಾಗಿ ಪ್ರಯಾಣಿಕರು ವಿಸ್ತಾರ ವಿಮಾನಯಾನಕ್ಕೆ ಸೆ.3ರಿಂದ ಬುಕಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ. ನ.12ರ ಬಳಿಕ ವಿಸ್ತಾರ ವಿಮಾನಗಳ ಏರ್‌ ಇಂಡಿಯಾದಡಿ ಕಾರ್ಯಾಚರಣೆ ನಡೆಸಲಿವೆ ಎಂದು ಸಂಸ್ಥೆ ತಿಳಿಸಿದೆ. ಇಷ್ಟಾಗಿಯೂ ನ.11ರ ವರೆಗೂ ವಿಸ್ತಾರದ ವಿಮಾನ ಹಾರಾಟ ಎಂದಿನಂತೆಯೇ ಇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next