Advertisement

ಹಿರಿಯ-ಕಿರಿಯ ಶಾಲೆಗಳ ವಿಲೀನ ಹತ್ತಿರದಲ್ಲಿರುವ ಶಾಲೆಗಳನ್ನು ಒಂದೆಡೆ ಸೇರಿಸಿ

11:50 PM Feb 03, 2023 | Team Udayavani |

ಬೆಂಗಳೂರು: ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸುವ ಬಗ್ಗೆ ಆಡ ಳಿತ ಸುಧಾರಣಾ ಆಯೋಗ ಶಿಫಾ ರಸು ಮಾಡಿದೆ.

Advertisement

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯ ಕರ್ನಾಟಕ 2ನೇ ಆಡಳಿತ ಸುಧಾರಣಾ ಆಯೋಗ ತನ್ನ 4 ಮತ್ತು 5ನೇ ವರದಿಯನ್ನು ಮುಖ್ಯ ಮಂತ್ರಿ ಬಸ ವ ರಾಜ ಬೊಮ್ಮಾಯಿ ಅವ ರಿಗೆ ಸಲ್ಲಿಸಿದೆ. 5 ವರದಿಗಳಿಂದ 3630 ಶಿಫಾರಸು ಮಾಡಲಾಗಿದೆ.

ಡ್ರಾಪ್‌ ಔಟ್‌ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಈ ಸಲಹೆಯನ್ನು ನೀಡಲಾಗಿದ್ದು, 100 ಮೀಟರ್‌ ಅಂತರದಲ್ಲಿರುವ 3457 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು 1667 ಹಿರಿಯ ಪ್ರಾಥಮಿಕ ಶಾಲೆಗಳ ಜತೆಗೆ ವಿಲೀನ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.

ಪರಸ್ಪರ 100 ಮೀಟರ್‌ ಅಂತರದಲ್ಲಿರುವ 2460 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳನ್ನು 1135 ಸಂಯುಕ್ತ/ ಕ್ಲಸ್ಟರ್‌ ಪ್ರೌಢಶಾಲೆಗಳಾಗಿ ಅಥವಾ ಪಬ್ಲಿಕ್‌ ಸ್ಕೂಲ್‌ಗ‌ಳಾಗಿ ವಿಲೀನಗೊಳಿಸಬಹುದು. 879 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳಾಗಿ ವಿಲೀನಗೊಳಿಸಬಹುದು. ಈ ಸೌಲಭ್ಯವನ್ನು ಖಾಸಗಿ ಡಳಿತ ಮಂಡಳಿ ಇರುವ ಶಾಲೆಗಳಿಗೂ ಅನ್ವಯಿಸಬಹುದು.

ಸರ್ಕಾರಿ ಶಾಲಾ ಕಟ್ಟಡದಿಂದ 300 ಮೀಟರ್‌ ಅಂತರದಲ್ಲಿರುವ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6307 ಅಂಗನವಾಡಿ ಕೇಂದ್ರಗಳನ್ನು ಕೊಠಡಿ ಲಭ್ಯವಿದ್ದಲ್ಲಿ ಹತ್ತಿರದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು. ಇದರಿಂದ ಅಂಗನವಾಡಿ ಮಕ್ಕಳು ಸುಲಭವಾಗಿ ಶಾಲೆಯಲ್ಲಿ ಮುಂದುವರಿಯುವುದಕ್ಕೆ ಅನುಕೂಲವಾಗುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಉತ್ತೀರ್ಣಕ್ಕೆ ಕನಿಷ್ಠ 20 ಅಂಕ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಉತ್ತೀರ್ಣತೆ ಪ್ರಮಾಣ ಕಡಿಮೆ ಇದೆ. ಜತೆಗೆ ದಾಖಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕಿದೆ. ಪಿಯುಸಿಯಲ್ಲಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೂ ಆಂತರಿಕ ಮೌಲ್ಯ ಮಾಪನ ಜಾರಿಗೆ ತರಬೇಕು. ಎಸ್ಸೆಸ್ಸೆಲ್ಸಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಲು 35 ಅಂಕಗಳನ್ನು ಪಡೆಯಬೇಕಾಗಿದೆ. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 28 ಅಂಕಗಳನ್ನು ಗಳಿಸಬೇಕಾಗಿದ್ದು ಇದನ್ನು 20 ಅಂಕಗಳಿಗೆ ಇಳಿಸಬಹುದು ಎಂದು ಶಿಫಾರಸು ಮಾಡಲಾಗಿದೆ.

ಕನ್ನಡ ಮಾಧ್ಯಮ ಪ್ರಮಾಣ ಪತ್ರ
ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ, ಕಲ್ಯಾಣ ಕರ್ನಾಟಕ ನಿವಾಸ ಪ್ರಮಾಣಪತ್ರ, ಕಲ್ಯಾಣ ಕರ್ನಾಟಕ ಪ್ರಮಾಣಪತ್ರ ಸಿಂಧುತ್ವವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಮಾಣಪತ್ರದಂತೆ ಜೀವಿತಾವಧಿವರೆಗೆ ಅಥವಾ ಸಿಂಧುತ್ವ ರದ್ದುಗೊಳಿಸುವವರೆಗೂ ವಿಸ್ತರಿಸಬಹುದು.

ಇತರೆ ಶಿಫಾರಸುಗಳು
1. ಶೇ.100ರಷ್ಟು ಸಾಕ್ಷರತೆ ಸಾಧಿಸಿದ ಗ್ರಾಮಪಂಚಾಯ್ತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರೋತ್ಸಾಹ ಪ್ರಶಸ್ತಿ
2. ಅಪೌಷ್ಟಿಕತೆ ನಿವಾರಿಸಲು ಮಕ್ಕಳಿಗೆ ನೀಡುವ ವಾರಕ್ಕೆರಡು ಮೊಟ್ಟೆಗಳನ್ನು 5ಕ್ಕೆ ಹೆಚ್ಚಿಸಬಹುದು.
3. ಅಂಗನವಾಡಿ ಶುಚಿತ್ವದ ವೆಚ್ಚವನ್ನು 200 ರೂಗಳಿಗೆ ಹೆಚ್ಚಿಸುವುದು
4. ಸಾಲ ಅನುದಾನವನ್ನು ದ್ವಿಗುಣಗೊಳಿಸುವುದು.
5. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ವಿಭಜನೆ
6. ಮಕ್ಕಳ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ, ಎರಡು ನಿರ್ದೇಶನಾಲಯ ಸ್ಥಾಪಿಸಬಹುದು.

ಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಇಳಿಸಿ
ಬೆಂಗಳೂರು: ಉತ್ತರಪ್ರದೇಶ ಸಹಿತ ಕೆಲವು ರಾಜ್ಯಗಳಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇದೆ. ರಾಜ್ಯದಲ್ಲೂ ಇದೇ ನಿಯಮ ಅನುಸರಿಸಬೇಕು ಎಂದು ರಾಜ್ಯ ಆಡ ಳಿತ ಸುಧಾ ರಣ ಆಯೋಗ ಶಿಫಾ ರಸು ಮಾಡಿದೆ.
ವರದಿಯ ಪ್ರಮುಖ ಶಿಫಾರಸುಗಳು
ಹೊರರೋಗಿ ಸೇವೆ: ಸರಕಾರಿ ವೈದ್ಯರ ಖಾಸಗಿ ವೃತ್ತಿಯನ್ನು ಕೇಂದ್ರ ಸರಕಾರದ ವೈದ್ಯಕೀಯ ಸಂಸ್ಥೆಗಳು ಮತ್ತು ಸಿಜಿಎಚ್‌ಎಸ್‌ ಮಾದರಿಯಲ್ಲಿ ನಿಷೇಧಿಸಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ಸಂಜೆ ಹೊರರೋಗಿ ಸೇವೆಯನ್ನು ಪ್ರಾರಂಭಿಸಬೇಕು.
ಎನ್‌ಆರ್‌ಐ ಕೋಟಾ: ಕರ್ನಾಟಕ ಸರಕಾರಿ ವೈದ್ಯಕೀಯ ಕಾಲೇಜು ಗಳಲ್ಲಿ ಶೇ.5ರಿಂದ ಶೇ.10 ಎನ್‌ಆರ್‌ಐ ಕೋಟಾ ಸೃಷ್ಟಿಸಿ ಹೆಚ್ಚಿನ ಶುಲ್ಕ ವಿಧಿಸಬಹುದು. ಪ್ರವೇಶ ಸಂದರ್ಭ ಶೇ.3.45 ಸೀಟುಗಳು ಮಾತ್ರ ಗ್ರಾಮೀಣ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದ್ದು, ಹೀಗಾಗಿ ಈ ಕೋಟಾವನ್ನು ಮಾರ್ಪಡಿಸಿ ಶೇ.15 ಗ್ರಾಮೀಣ ಕೋಟಾವನ್ನು ಗ್ರಾಮೀಣ ರಾಜ್ಯ ಸರಕಾರಿ ಕೋಟಾವಾಗಿ ಪರಿವರ್ತಿಸಬೇಕು.
ಪ್ರಮಾಣ ಪತ್ರ ಅಗತ್ಯವಿಲ್ಲ: ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮತ್ತು ಕ್ಲಸ್ಟರ್‌ ಶಾಲೆಗಳಲ್ಲಿ 1ರಿಂದ 12ನೇ ತರಗತಿವರೆಗೆ ಮಗುವಿಗೆ 3 ಬಾರಿ ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಳ್ಳುವ ಮತ್ತು ಪ್ರವೇಶ ಪಡೆಯುವ ಅಗತ್ಯವನ್ನು ತೆಗೆದು ಹಾಕಬಹುದು.
ಪಿ.ಜಿ. ವಿದ್ಯಾರ್ಥಿಗಳ ನೇಮಿಸಿ: ಇಡೀ ದಿನ ಪ್ರಸೂತಿ ಸೇವೆ ಒದಗಿಸಲು ಕೆಲಸದ ಹೊರೆ ಹೊಂದಿರುವ ತಾಲೂಕು ಆಸ್ಪತ್ರೆಗಳಿಗೆ ಪ್ರಸೂತಿ ಮಕ್ಕಳ ಹಾಗೂ ಅರಿವಳಿಕೆ ತಜ್ಞರ ಹೆಚ್ಚುವರಿ ಹುದ್ದೆ ಮಂಜೂರು ಮಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನೇಮಿಸಬಹುದು.
ಕೈಗಾ ರಿಕಾ ತರ ಬೇತಿ ಇಲಾಖೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯನ್ನು ಕೈಗಾರಿಕಾ ತರಬೇತಿ ಇಲಾಖೆಯಾಗಿ ಮರು ನಾಮಕರಣ ಮಾಡಲು ಶಿಫಾರಸು ಮಾಡಲಾಗಿದೆ.
ರೈತ ಸಲಹಾ ಸಮಿತಿ: ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಚುನಾಯಿತ ಪ್ರತಿನಿಧಿಗಳು, ಪ್ರಗತಿಪರ ರೈತರು, ಪ್ರಶಸ್ತಿ ಪುರಸ್ಕೃತ ರೈತರು, ಕಂದಾಯ, ತೋಟಗಾರಿಕೆ, ಅರಣ್ಯ, ಸಂಪರ್ಕ ವಿಜ್ಞಾನಿಗಳು ಹಾಗೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ರೈತ ಸಲಹಾ ಸಮಿತಿ ಸ್ಥಾಪಿಸಬಹುದು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next