Advertisement

ಕೆಲವು ದಿನ ಒಟ್ಟಿಗಿದ್ದರೆ ಅದು ಲಿವ್‌ ಇನ್‌ ರಿಲೇಶನ್‌ಶಿಪ್‌ ಅಲ್ಲ: ಹೈಕೋರ್ಟ್‌

11:57 PM Dec 16, 2021 | Team Udayavani |

ಚಂಡೀಗಢ: ಕೆಲವು ದಿನಗಳ ಕಾಲ ಒಟ್ಟಿಗೆ ಬದುಕಿದಾಕ್ಷಣ ಅದನ್ನು ಲಿವ್‌-ಇನ್‌-ರಿಲೇಶನ್‌ಶಿಪ್‌ ಎಂದು ವಾದಿಸಲಾಗುವುದಿಲ್ಲ ಎಂದು ಪಂಜಾಬ್‌ ಮತ್ತು ಹರಿಯಾಣ ಹೈ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

20 ವರ್ಷದ ಯುವಕ ಮತ್ತು 18 ವರ್ಷದ ಯುವತಿ, ಮನೆಯವರಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯ, ಅರ್ಜಿ ತಿರಸ್ಕರಿಸಿದ್ದು, ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ದೀರ್ಘ‌ ಕಾಲಾವಧಿಯಲ್ಲಿ ಯುವಕ ಯುವತಿ ಇಬ್ಬರೂ ಜವಾಬ್ದಾರಿ ಹಂಚಿಕೊಂಡು, ಸಹಬಾಳ್ವೆಯೊಂದಿಗೆ ಬದುಕಿದರೆ ಮಾತ್ರವೇ ಅದು ದಾಂಪತ್ಯಕ್ಕೆ ಸರಿಹೊಂದುವ ಲಿವ್‌-ಇನ್‌-ರಿಲೇಶನ್‌ಶಿಪ್‌ ಆಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಜೋಡಿಯ ಪ್ರೀತಿಗೆ ಯುವತಿಯ ಮನೆಯವರ ಒಪ್ಪಿಗೆ ಇಲ್ಲದ ಹಿನ್ನೆಲೆಯಲ್ಲಿ ಲಿವ್‌-ಇನ್‌-ರಿಲೇಶನ್‌ಶಿಪ್‌ನಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next