Advertisement

ಪರಿಹಾರ ನೀಡಲು ವ್ಯಾಪಾರಿಗಳ ಮನವಿ

07:02 PM Mar 23, 2021 | Adarsha |

ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಕೈಗೊಂಡಿರುವುದರಿಂದ ರಸ್ತೆ ಅಗಲೀಕರಣ ನಡೆಯುತ್ತಿದೆ. ಹೀಗಾಗಿ ಇಲ್ಲಿ ಇರುವ ಮಳಿಗೆಯನ್ನು ತೆರವು ಗೊಳಿಸಬೇಕಾಗಿರುವುದರಿಂದ ಪರಿಹಾರ ಹಣ ನೀಡಬೇಕೆಂದು ಮಳಿಗೆ ಬಾಡಿಗೆದಾರರು ಸೋಮವಾರ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Advertisement

ಸವಳಂಗ ರಸ್ತೆಯಲ್ಲಿರುವ ಮಳಿಗೆಗಳಲ್ಲಿ ಕಳೆದ 15-20 ವರ್ಷಗಳಿಂದ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು, ಈಗ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಮಾಡುತ್ತಿರುವುದರಿಂದ ರಸ್ತೆ ಅಗಲೀಕರಣ ನಡೆಯುತ್ತಿದೆ.

ಹೀಗಾಗಿ ಮಳಿಗೆ ತೆರವುಗೊಳಿಸಲು ಮಹಾನಗರ ಪಾಲಿಕೆ ಮಾರ್ಕ್‌ ಮಾಡಿದ್ದು, ತೆರವು ಮಾಡಬೇಕಾಗಿದೆ. ಆದರೆ ವ್ಯಾಪಾರವನ್ನೇನಂಬಿರುವ ನಮಗೆ ಬೇರೆ ಯಾವುದೇ  ಆದಾಯ ಇಲ್ಲ. ಮಳಿಗೆ ಇಲ್ಲದೆ ವ್ಯಾಪಾರ ಇಲ್ಲವಾಗುತ್ತದೆ. ಇದರಿಂದ ನಮ್ಮ ಕುಟುಂಬದ ಜೀವನ ನಿರ್ವಹಣೆಗೆ

ತುಂಬಾ ಕಷ್ಟಕರವಾಗುತ್ತಿದೆ. ಹಾಗಾಗಿ ಪರಿಹಾರ ಹಣ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭ ದಲ್ಲಿ ಎಚ್‌.ಜಿ. ಸತೀಶ್‌, ರಾಘವೇಂದ್ರ, ಜಿ.ರೇವಣಸಿದ್ಧಪ್ಪ, ಆರ್‌. ಗಣೇಶ್‌, ಎಂ.ಜಿ. ಕೃಷ್ಣಮೂರ್ತಿ, ಜೆ.ಜೆ. ರಾಜು, ರಘು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next