Advertisement

Mercedes Benz C300 ಎಎಂಜಿ ಲೈನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ…ಬೆಲೆ ಎಷ್ಟು?

02:28 PM Jun 05, 2024 | |

ನವದೆಹಲಿ: ಜರ್ಮನಿಯ ಐಶಾರಾಮಿ ಕಾರು ತಯಾರಿಕೆ ಕಂಪನಿ ಮರ್ಸಿಡಿಸ್‌ ಬೆಂಜ್‌ ಇದೀಗ ತನ್ನ ಜನಪ್ರಿಯ ಸಿ ಕ್ಲಾಸ್‌ ಮಾಡೆಲ್‌ ರೇಂಜ್‌ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದು, ಇದರೊಂದಿಗೆ ನೂತನ ಸಿ300 ಎಎಂಜಿ ಲೈನ್‌ ಮಾರುಕಟ್ಟೆಗೆ ಬರಲಿದ್ದು, ಇದರ ಬೆಲೆ 69 ಲಕ್ಷ ರೂಪಾಯಿ ಎಂದು ತಿಳಿಸಿದೆ.

Advertisement

ಇದನ್ನೂ ಓದಿ:BJP ಅಯೋಧ್ಯೆಯಲ್ಲೇ ಸೋತಿದೆ, ಮೋದಿ ಆ ಮಾತು ಹೇಳಬಾರದಿತ್ತು: ವಿಶ್ವನಾಥ್

ಮರ್ಸಿಡಿಸ್‌ ಬೆಂಜ್‌ ನ ಸಿ ಕ್ಲಾಸ್‌ ನಲ್ಲಿ ಸಿ200, ಸಿ200ಡಿ ಮತ್ತು ಸಿ300 ಎಎಂಜಿ ಲೈನ್‌ ಸೇರಿದಂತೆ ಮೂರು ಶ್ರೇಣಿಯ ಕಾರುಗಳು ಲಭ್ಯವಿದೆ.

ಹಳೆಯ ಡೀಸೆಲ್‌ ಪವರ್ಡ್‌ ಸಿ300ಡಿ ಎಎಂಜಿ ಲೈನ್‌ ಅನ್ನು ನೂತನವಾಗಿ ಬಿಡುಗಡೆ ಮಾಡಲಾಗಿದೆ. ಎಕ್ಸ್‌ ಶೋರೂಂ ಬೆಲೆ ಸಿ200 61.85 ಲಕ್ಷ ರೂಪಾಯಿ ಮತ್ತು ಸಿ200ಡಿ ಬೆಲೆ 62.85 ಲಕ್ಷ ರೂಪಾಯಿ ಎಂದು ನಿಗದಿಪಡಿಸಿದೆ.

High-performance C43 ಎಂಎಂಜಿ ಬೆಲೆ 98.25 ಲಕ್ಷ (ಎಕ್ಸ್‌ ಶೋರೂಂ) ರೂಪಾಯಿ ಎಂದು ಪ್ರಕಟನೆ ತಿಳಿಸಿದೆ. ನೂತನ ಸಿ300 ಎಎಂಜಿ ಲೈನ್‌ ಸ್ಫೋರ್ಟಿಯರ್‌ ಡಿಸೈನ್‌ ಹೊಂದಿದ್ದು, ಮುಂಭಾಗದ ಮತ್ತು rear ಬಂಪರ್‌ ಗಳನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next