Advertisement

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ನನ್ನ ಮಗ ಮುಗ್ದ, ತಪ್ಪು ಮಾಡುವವನಲ್ಲ; ವಿನೋದ್ ಆರ್ಯ

04:34 PM Sep 25, 2022 | Team Udayavani |

ಉತ್ತರಾ ಖಂಡ್ : ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪುಲ್ಕಿತ್ ಆರ್ಯನ ಕುರಿತು ಆತನ ತಂದೆ ಬಿಜೆಪಿ ನಾಯಕ ವಿನೋದ್ ಆರ್ಯ ಮಗನನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿನೋದ್ ಆರ್ಯ ಅವರು ನನ್ನ ಮಗ ತಪ್ಪು ಮಾಡುವವನಲ್ಲ, ಅವನಾಯಿತು ಅವನ ಕೆಲಸವಾಯಿತು ಅಲ್ಲದೆ ಇತ್ತೀಚೆಗೆ ಆತ ಬೇರೆಯೇ ವಾಸವಾಗಿದ್ದ ಎಂದು ಹೇಳಿಕೊಂಡಿದ್ದ ಅವರು ನನ್ನ ಮಗ ಕೊಲೆ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಯುತವಾಗಿ ತನಿಖೆ ನಡೆಯಲಿ ಎಂದು ಪಕ್ಷಕ್ಕೆ ರಾಜಿನಾಮೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗನ ಹೆಸರು ಬಂದ ಕೂಡಲೇ ವಿನೋದ್ ಆರ್ಯ ಮತ್ತು ಅವರ ಮಗನನ್ನು ಪಕ್ಷದಿಂದ ಹೊರಹಾಕಿದೆ. ಅಲ್ಲದೆ ಪುಲ್ಕಿತ್ ಆರ್ಯನ ಸಹೋದರನನ್ನು ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಸರ್ಕಾರ ತೆಗೆದುಹಾಕಿದೆ.

ಅತ್ತ ಅಂಕಿತಾ ಭಂಡಾರಿ ಮನೆಯವರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವೇ ಮಗಳ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಆಕೆಯ ತಂದೆ ವೀರೇಂದ್ರ ಸಿಂಗ್ ಭಂಡಾರಿ ಭಾನುವಾರ ತೀವ್ರ ನೋವು ಹೊರ ಹಾಕಿದ್ದಾರೆ.

ಇಬ್ಬರಿಗೂ ನ್ಯಾಯ ಸಿಗಲಿ
ಅಂಕಿತಾ ಪೋಷಕರು ತನ್ನ ಮಗಳ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರೆ ಇತ್ತ ವಿನೋದ್ ಆರ್ಯ ಪುತ್ರ ಸೇರಿ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ, ತನ್ನ ಮಗ ಮುಗ್ದ, ತಪ್ಪು ಮಾಡುವವನಲ್ಲ, ಅಂಕಿತಾಳು ಒಳ್ಳೆಯ ಹುಡುಗಿ ಇಬ್ಬರಿಗೂ ನ್ಯಾಯ ಸಿಗಲಿ ಎಂದಿದ್ದಾರೆ.

Advertisement

ಇದನ್ನೂ ಓದಿ : ಶಾಕಿಂಗ್‌ ನ್ಯೂಸ್‌… ಕಪ್ಪೆಗಳ ಸಾವು ಮನುಷ್ಯನ ಜೀವಕ್ಕೆ ಕಂಟಕ!

ಹರಿದ್ವಾರದಲ್ಲಿ 2016 ರಲ್ಲಿ ಪುಲ್ಕಿತ್ ವಿರುದ್ಧ ಐಪಿಸಿಯ ಸೆಕ್ಷನ್ 420 ಮತ್ತು 468 ರ ಅಡಿಯಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಲಾಕ್‌ಡೌನ್ ಸಮಯದಲ್ಲಿಯೂ ಪುಲ್ಕಿತ್ ವಿವಾದಗಳಿಗೆ ಸಿಲುಕಿದರು ಎಂದು ಮೂಲವೊಂದು ತಿಳಿಸಿದೆ. ಅವರು ಉತ್ತರ ಪ್ರದೇಶದ ವಿವಾದಿತ ನಾಯಕ ಅಮರಮಣಿ ತ್ರಿಪಾಠಿ ಅವರೊಂದಿಗೆ ಉತ್ತರಕಾಶಿಯ ನಿರ್ಬಂಧಿತ ಪ್ರದೇಶ ಪ್ರವೇಶಿಸಿ ಸುದ್ದಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next