Advertisement

ಮಾನಸಿಕ ಅಸ್ವಸ್ಥರು ಮುಖ್ಯವಾಹಿನಿಗೆ ಬರಲಿ

10:12 AM Oct 11, 2017 | |

ಹಂಪನಕಟ್ಟೆ: ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಬೇಕು. ‘ಮಾನಸಾಧಾರ’ದಂತಹ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಲಿದೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವಿ ಎಂ. ನಾಯ್ಕ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ. ಮತ್ತು ವೆನ್ಲ್ಲಾಕ್‌ ಆಸ್ಪತ್ರೆಯ ಆಶ್ರಯದಲ್ಲಿ ಆಸ್ಪತ್ರೆಯ ಆರ್‌ಎಪಿಸಿಸಿ ಕಾನ್ಫರೆನ್ಸ್‌ ಹಾಲ್‌ನಲ್ಲಿ ಮಂಗಳವಾರ ಜರಗಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಾಧಾರ ಪುನರ್ವಸತಿ ಕೇಂದ್ರಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಳ್ಮೆ, ಸಹಿಷ್ಣುತೆಯ ಗುಣವನ್ನು ರೂಢಿಸಿಕೊಂಡಾಗ ಮನಸ್ಸು ಏಕಾಗ್ರತೆ ಪಡೆದುಕೊಳ್ಳುತ್ತದೆ. ಮಾನಸಿಕ ಸಮತೋಲನಕ್ಕೂ ಇದೇ ಕಾರಣವಾಗುತ್ತದೆ. ಮಾನಸಿಕವಾಗಿ ಮನುಷ್ಯ ದೃಢತೆ ಕಾಯ್ದುಕೊಂಡಾಗ ಜೀವನವೂ ಸುಸೂತ್ರವಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ| ಎಂ. ಆರ್‌. ರವಿ ಮುಖ್ಯ ಅತಿಥಿಯಾಗಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌, ವೆನ್ಲ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ|
ರಾಜೇಶ್ವರಿ ದೇವಿ, ವಕೀಲರ ಸಂಘದ ಅಧ್ಯಕ್ಷ ಎಂ. ಆರ್‌. ಬಲ್ಲಾಳ್‌, ಎಸ್‌ಡಿಎಂ ಕಾನೂನು ಕಾಲೇಜಿನ ಕಾನೂನು ನೆರವು ವಿಭಾಗದ ಮುಖ್ಯಸ್ಥೆ ಡಾ| ಬಾಲಿಕಾ, ನೋಡಲ್‌ ಅಧಿಕಾರಿ ಶರೀಫ್‌, ಡಾ| ರತ್ನಾಕರ ಉಪಸ್ಥಿತರಿದ್ದರು.

Advertisement

ಮಾನಸಿಕ ರೋಗ ತಜ್ಞರಾದ ಡಾ| ಪಿ. ವಿ. ಭಂಡಾರಿ, ಡಾ| ರವೀಶ್‌ ತುಂಗ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next