Advertisement
ಹೆಚ್ಚಿನವರು ಒಂದಲ್ಲ ಒಂದು ಮನೋ ರೋಗಕ್ಕೆ ಸಿಲುಕಿ ನರಳುತ್ತಿರುತ್ತಾರೆ. ರಾಜಕಾರಣಿಗಳ ಭಾಷಣಗಳಲ್ಲಿ ಕ್ರೀಡೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ನಿಮಗೊತ್ತೆ?…ಬಹುತೇಕ ಕ್ರೀಡಾಪಟುಗಳು ಗೆಲ್ಲಲೇಬೇಕು ಎನ್ನುವ ತೀವ್ರ ಒತ್ತಡದಲ್ಲಿ ಇಂದು ಮನೋ ರೋಗಿಗಳಾಗಿ ಬದಲಾಗುತ್ತಿದ್ದಾರೆ. ಇಂತಹವರಲ್ಲಿ ಕ್ರಿಕೆಟ್ ತಾರೆಯರು ಕೂಡ ಇದ್ದಾರೆ. ಭಾರತ ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್‌ನಿಂದ ಹಿಡಿದು ಇತ್ತೀಚೆಗಿನ ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ವರೆಗಿನ ಕ್ರಿಕೆಟಿಗರು ಮನೋ ರೋಗಕ್ಕೆ ತುತ್ತಾಗಿರುವುದೇಕೆ? ಎನ್ನುವ ಕುರಿತ ಕುತೂಹಲಕಾರಿ ವರದಿ ಇಲ್ಲಿದೆ.
ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರತಿಭಾವಂತ ಕ್ರಿಕೆಟಿಗ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ಆಸ್ಟ್ರೇಲಿಯ ಕ್ರಿಕೆಟ್‌ನಲ್ಲೂ ಮ್ಯಾಕ್ಸ್‌ವೆಲ್ ಸ್ಫೋಟಕ ತಾರೆಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಈಚೆಗೆ ಮ್ಯಾಕ್ಸ್‌ವೆಲ್ ಸಿಡಿಯುತ್ತಿಲ್ಲ. ಫಾರ್ಮ್ ನಿರಂತರವಾಗಿ ಕುಸಿಯುತ್ತಿದೆ. ಅಸ್ಥಿರ ಫಾರ್ಮ್ನಿಂದ ಮನೋರೋಗಕ್ಕೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀಲಂಕಾ, ಪಾಕಿಸ್ತಾನ ಸರಣಿಯಿಂದ ಮ್ಯಾಕ್ಸ್‌ವೆಲ್‌ಗೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ವಿಶ್ರಾಂತಿ ಘೋಷಿಸಿತ್ತು. ಮ್ಯಾಕ್ಸ್‌ವೆಲ್ ಚೇತರಿಕೆ ನಮಗೆ ಅತಿ ಮುಖ್ಯ. ತಾರಾ ಆಟಗಾರರಾದ ಅವರು ಕಲವು ದಿನಗಳು ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ಹೊಸ ಮನುಷ್ಯನಾಗಿ ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸಿಎ ತಿಳಿಸಿತ್ತು. ಟೆಸ್ಟ್
ಬ್ಯಾಟಿಂಗ್: ಪಂದ್ಯ: 7, ರನ್: 339, ಶ್ರೇಷ್ಠ: 104, ಶತಕ 1
ಬೌಲಿಂಗ್: ಪಂದ್ಯ: 7, ವಿಕೆಟ್: 8, ಶ್ರೇಷ್ಠ: 127/4
Related Articles
ಬ್ಯಾಟಿಂಗ್: ಪಂದ್ಯ: 110, ರನ್: 2877, ಶ್ರೇಷ್ಠ: 102, ಶತಕ 1, ಅರ್ಧಶತಕ:19
ಬೌಲಿಂಗ್: ಪಂದ್ಯ: 110, ಶ್ರೇಷ್ಠ: 46/4, ವಿಕೆಟ್: 50
Advertisement
ಟಿ20ಬ್ಯಾಟಿಂಗ್: ಪಂದ್ಯ: 61, ರನ್: 1576, ಶ್ರೇಷ್ಠ: 145, ಶತಕ:3, ಅರ್ಧಶತಕ:7
ಬೌಲಿಂಗ್: ಪಂದ್ಯ: 61, ಶ್ರೇಷ್ಠ:10/3, ವಿಕೆಟ್:26 ಟ್ರೆಸ್ಕೊಥಿಕ್‌ಗೂ ಬಿಡಲಿಲ್ಲ ಮನೋರೋಗ
ಮಾಜಿ ಕ್ರಿಕೆಟಿಗ ಮಾರ್ಕಸ್ ಟ್ರೆಸ್ಕೋಥಿಕ್ ಒಳಗೊಂಡ ಇಂಗ್ಲೆಂಡ್ ತಂಡ 2006ರಲ್ಲಿ ಭಾರತ ಪ್ರವಾಸಕ್ಕೆ ಹೊರಟಿತ್ತು. ಈ ವೇಳೆ ಟ್ರೆಸ್ಕೋಥಿಕ್ ವೈರಲ್ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಈ ಸರಣಿಯ ಬಳಿಕ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಮೊದಲ ಮೂರು ಅಭ್ಯಾಸ ಪಂದ್ಯದಲ್ಲಿ ಆಡಿದ್ದ ಟ್ರೆಸ್ಕೊಥಿಕ್ ಒತ್ತಡ ಸಂಬಂಧಿತ ಕಾಯಿಲೆಯಿಂದ ತಂಡದಿಂದ ಹೊರಬಿದ್ದಿದ್ದು ವರದಿಯಾಗಿತ್ತು. ಈ ಸಮಸ್ಯೆಯಿಂದ ಅವರಿಗೆ ಕೊನೆಗೂ ಹೊರಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ 2008ರಲ್ಲಿ ಟ್ರೆಸ್ಕೋಥಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಗುಣಮುಖಿರಾದ ಬಳಿಕ ಟ್ರೆಸ್ಕೊಥಿಕ್ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದರು. 2019ರ ಆರಂಭದಲ್ಲಿ ಅಲ್ಲಿಗೂ ನಿವೃತ್ತಿ ಘೋಷಿಸಿದ್ದರು. ಟೆಸ್ಟ್
ಪಂದ್ಯ: 76, ರನ್: 5825, ಗರಿಷ್ಠ: 219, ಶತಕ: 100, ಅರ್ಧಶತಕ: 29 ಏಕದಿನ
ಪಂದ್ಯ: 123, ರನ್: 4335, ಗರಿಷ್ಠ: 137, ಶತಕ: 12, ಅರ್ಧಶತಕ: 21 ಟಿ20
ಪಂದ್ಯ: 3, ವಿಕೆಟ್: 72, ಅರ್ಧಶತಕ: 2 ಮರದ ಮೇಲೆ ಕಾರು ಚಲಾಯಿಸಿದ್ದ ಜೋನಾಥನ್!
2013ರಲ್ಲಿ ಆಸ್ಟ್ರೇಲಿಯ ಸರಣಿಗೆ ತೆರಳಿದ್ದ ವೇಳೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋನಾಥನ್ ಟ್ರಟ್ ಮಾನಸಿಕ ಖಿನ್ನತೆಗೆ ತಲುಪಿದ್ದರು. ಹೀಗಾಗಿ ಸರಣಿಯಿಂದ ಅರ್ಧಕ್ಕೆ ಹಿಂದೆ ಬಂದಿದ್ದರು. ನೋವಿನ ದಿನಗಳ ಅನುಭವನ್ನು ಪುಸಕ್ತದಲ್ಲಿ ದಾಖಿಲಿಸಿದ್ದ ಟ್ರಟ್ ಥೇಮ್ಸ್ ನದಿಯಲ್ಲಿ ಮೇಲೆ ಅಥವಾ ಯಾವುದೊ ಒಂದು ಮರದ ಮೇಲೆ ಕಾರು ಚಲಾಯಿಸಿದ ಅನುಭ ಆಗಿತ್ತು ಎಂದು ಆ ದಿನಗಳ ಅನುಭವ ಬಗ್ಗೆ ಬರೆದಿದ್ದರು. 18 ತಿಂಗಳು ವಿಶ್ರಾಂತಿಯಲ್ಲಿದ್ದು ಸುಧಾರಿಸಿದ ಬಳಿಕ ಕ್ರಿಕೆಟ್‌ಗೆ ಮರಳಿದ್ದನ್ನು ಅವರು ನೆನಪಿಸಿಕೊಂಡಿದ್ದರು. ಟೆಸ್ಟ್
ಪಂದ್ಯ: 52, ರನ್: 3835, ಗರಿಷ್ಠ: 226, ಶತಕ: 9, ಅರ್ಧಶತಕ: 19 ಏಕದಿನ
ಪಂದ್ಯ: 68, ರನ್: 2819, ಗರಿಷ್ಠ: 137, ಶತಕ: 4, ಅರ್ಧಶತಕ: 22 ಟಿ20
ಪಂದ್ಯ: 7, ರನ್: 138, ಅರ್ಧಶತಕ: 1 ಸಾರಾ ಟೇಲರ್‌ಗೂ ಸಂಕಷ್ಟ
ಮಾನಸಿಕ ಖಿನ್ನತೆ ಮಹಿಳಾ ಕ್ರಿಕೆಟಿಗರನ್ನೂ ಬಿಟ್ಟಿಲ್ಲ. ಇಂಗ್ಲೆಂಡ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ವುಮನ್ ಸಾರಾ ಟೇಲರ್ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ ಕೂಟದಲ್ಲಿ ಹೆಚ್ಚು ರನ್ ಸಿಡಿಸಿದ ಮೂರನೇ ಬ್ಯಾಟ್ಸ್‌ವುಮನ್ ಆಗಿದ್ದರು. ವಿಕೆಟ್ ಹಿಂದೆ 232 ಬಲಿ ಪಡೆದಿದ್ದರು. 30 ವರ್ಷದ ಸಾರಾ ಮಾನಸಿಕ ಖಿನ್ನತೆಯಿಂದಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಟೆಸ್ಟ್
ಪಂದ್ಯ: 10, ರನ್: 300, ಗರಿಷ್ಠ: 40 ಏಕದಿನ
ಪಂದ್ಯ: 126, ರನ್: 4056, ಗರಿಷ್ಠ: 147, ಶತಕ: 7, ಅರ್ಧಶತಕ: 20 ಖಿನ್ನತೆಗೆ ನಲುಗಿದ್ದ ಶಾನ್ ಟೈಟ್
ಆಸ್ಟ್ರೇಲಿಯಾದ ಮಾಜಿ ವೇಗಿಯ ಕ್ರಿಕೆಟ್ ಜೀವನ ಹಾಳಾಗಲು ಮಾನಸಿಕ ಖಿನ್ನತೆ ಪ್ರಮುಖಿ ಕಾರಣವಾಯಿತು. 2008ರಲ್ಲಿ ಅನಾರೋಗ್ಯದಿಂದಾಗಿ ಕ್ರಿಕೆಟ್‌ನಿಂದ ಹಿಂದೆ ಸರಿದರು, ಮತ್ತೆ ಕ್ರಿಕೆಟ್‌ಗೆ ಮರಳಿದರಾದರೂ ಅವರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಟೆಸ್ಟ್
ಪಂದ್ಯ: 3, ಶ್ರೇಷ್ಠ:97/3, ಪಡೆದ ವಿಕೆಟ್: 5 ಏಕದಿನ
ಪಂದ್ಯ: 35, ಶ್ರೇಷ್ಠ: 39/4, ಪಡೆದ ವಿಕೆಟ್: 62 ಟಿ20
ಪಂದ್ಯ: 21, ಶ್ರೇಷ್ಠ:13/3, ಪಡೆದ ವಿಕೆಟ್: 28 ಮಣಿಂದರ್ ಸಿಂಗ್
ಮಣಿಂದರ್ 17ನೇ ವರ್ಷದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತುಂಬಾ ಯೋಚಿಸುತ್ತಿದ್ದರು, ನೋಡ ನೋಡುತ್ತಿದ್ದಂತೆ ಕುಡಿತದ ದಾಸರಾದರು, ಬಳಿಕ ಡ್ರಗ್ಸ್ ಸೇವೆನೆಯನ್ನೂ ಮಾಡಿ ಸಿಕ್ಕಿಬಿದ್ದಿದ್ದರು. ಹೀಗಾಗಿಯೋ ಏನೋ ಕೇವಲ 30 ವರ್ಷಕ್ಕೆ ಅವರ ಕ್ರಿಕೆಟ್ ಜೀವನ ಅಂತ್ಯಗೊಂಡಿತ್ತು. ಆ ಬಳಿಕ ಮನೋ ತಜ್ಞರ ಭೇಟಿಯಾಗಿ ಚಿಕಿತ್ಸೆ ಪಡೆದು ಸ್ವಲ್ಪ ಸುಧಾರಿಸಿದ್ದರು. ಟೆಸ್ಟ್
ಪಂದ್ಯ: 35, ಶ್ರೇಷ್ಠ:27/7, ಪಡೆದ ವಿಕೆಟ್: 88 ಏಕದಿನ
ಪಂದ್ಯ: 59, ಶ್ರೇಷ್ಠ: 22/4, ಪಡೆದ ವಿಕೆಟ್: 66