Advertisement
ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದಲ್ಲಿ ನಾವು ಕೆಲಸದಲ್ಲಿ ಉತ್ಸುಕರಾಗಿರಲು, ಫಲದಾಯಕರಾಗಿರಲು ಸಾಧ್ಯವಾಗುತ್ತದೆ. ಜಾಗತಿಕ ಸ್ಪರ್ಧಾತ್ಮಕ ಪ್ರಕ್ರಿಯೆಗಳಿಂದಾಗಿ ಉದ್ಯೋಗ ಸಂಸ್ಥೆಗಳು, ಸಹೋದ್ಯೋಗಿಗಳೊಡನೆ ಇರುವ ಸಂಬಂಧಗಳು ಹಾಗೂ ಉದ್ಯೋಗ ಮಾದರಿಗಳು ಕೆಲಸದೊತ್ತಡವಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ಮಾನಸಿಕ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಜಾಗತಿಕ ಸ್ಪರ್ಧೆ ಹಾಗೂ ತ್ವರಿತ ಸಂವಹನದಿಂದಾಗಿ ಕೆಲಸ ಹಾಗೂ ಜೀವನವನ್ನು ಪ್ರತ್ಯೇಕಿಸಲು ಕಷ್ಟವಾಗುತ್ತಿದೆ. ನಾವೆಲ್ಲರೂ ಇತ್ತೀಚೆಗೆ ಅನುಭವಿಸಿದ ಜಾಗತಿಕ ಆರ್ಥಿಕ ಬಿಕ್ಕಟ್ಟು ಹಾಗೂ ಹಿಂಜರಿತದಿಂದಾಗಿ ಬಹಳಷ್ಟು ಉದ್ಯಮಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ವಿಲೀನಗೊಳಿಸುವಿಕೆ, ಹೊರಗುತ್ತಿಗೆ, ಉಪಗುತ್ತಿಗೆಗಳ ಮುಖಾಂತರ ನಡೆಸುತ್ತಿವೆ. ಹೀಗಾಗಿ ಕೆಲಸದ ತಾಣಗಳಲ್ಲಿ ಸ್ಪರ್ಧೆಗಳು ಹೆಚ್ಚಿವೆ, ಉದ್ಯೋಗ ನೀಡಿರುವವರಿಂದ ನಿರೀಕ್ಷೆಗಳು, ವೇಗದ ರೀತಿಯ ತೀವ್ರ ಕೆಲಸ, ಅನಿಯಮಿತ ಕೆಲಸದ ಸಮಯ, ಕೆಲಸದ ಹೆಚ್ಚುತ್ತಿರುವ ಬೇಡಿಕೆಗಳು, ಉದ್ಯೋಗದ ಅಭದ್ರತೆ, ಕೆಲಸದ ವಿಷಯಗಳ ಬಗ್ಗೆ ನಿಯಂತ್ರಣದ ಕೊರತೆ, ಕೆಲಸದ ಸಂಘಟಣೆ ಹಾಗೂ ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಇವೆಲ್ಲ ಕಾರಣಗಳಿಂದಾಗಿ ಕೆಲಸ ಮಾಡುವವರಲ್ಲಿರುವ ಪ್ರೇರಣೆ, ತೃಪ್ತಿ ಹಾಗೂ ಸೃಜನಶೀಲತೆ ಕುಂಠಿತವಾಗಿದೆ.ಉದ್ಯೊಗದಿಂದ ಉಂಟಾಗುವ ದೀರ್ಘಕಾಲದ ಒತ್ತಡಗಳು ನಮ್ಮ ದೈಹಿಕ ಆರೋಗ್ಯವನ್ನು ಕೆಡಿಸುತ್ತಿದೆ. ಕೆಲಸದ ಜವಾಬ್ದಾರಿಗಳ ಬಗ್ಗೆ ನಿರಂತರವಾದ ಮುಂದಾಲೋಚನೆಯಿಂದಾಗಿ ಅನಿಯಮಿತ ಆಹಾರ ಸೇವಿಸುವ ಅಭ್ಯಾಸಗಳು, ಅಧಿಕ ರಕ್ತದೊತ್ತಡ, ಸಾಕಷ್ಟು ವ್ಯಾಯಾಮದ ಕೊರತೆ, ದೇಹದ ತೂಕ ಹೆಚ್ಚುವಿಕೆ, ಇತ್ಯಾದಿಗಳು ಉಂಟಾಗಿವೆ. ಬರ್ನ್ ಔಟ… ಎಂಬ ಸಮಸ್ಯೆ ಉಂಟಾಗಿ ಉದ್ಯೋಗಿಗಳಲ್ಲಿ ಮಾನಸಿಕ ಖನ್ನತೆ ಉದ್ಭವಿಸುತ್ತಿದೆ. ಅತೀಯಾದ ಹಾಗೂ ದೀರ್ಘಕಾಲದ ಒತ್ತಡದಿಂದಾಗಿ ಉಂಟಾಗುವ ಭಾವನಾತ್ಮಕ, ಮಾನಸಿಕ ಹಾಗೂ ದೈಹಿಕ ಬಳಲಿಕೆಯನ್ನು ಬರ್ನ್ ಔಟ… ಎನ್ನುವರು. ಇದರಿಂದಾಗಿ ಹ್ರದಯಕ್ಕೆ ಸಂಭಂದಪಟ್ಟ ಕಾಯಿಲೆಗಳು, ಸ್ಟ್ರೋಕ್, ಸ್ಥೂಲಕಾಯತೆ, ತಿನ್ನುವ ಅಸ್ವಸ್ಥತೆಗಳು, ಸಕ್ಕರೆ ಕಾಯಿಲೆ ಮುಂತಾದುವುಗಳು ಉಂಟಾಗಬಹುದು. ಬಹುಕಾಲದ ಖನ್ನತೆಯಿಂದಾಗಿ ವಿನಾಯತಿ ಕಡಿಮೆಯಾಗಿ ಇನ್ನಿತರ ಕಾಯಿಲೆಗಳು ಉಂಟಾಗಬಹುದು. ಇವೆಲ್ಲವುಗಳಿಂದ ಕೆಲಸದ ಅಪಘಾತಗಳು ಹೆಚ್ಚಬಹುದು ಹಾಗೂ ಓರ್ವ ಉದ್ಯೋಗಿಯ ಕೆಲಸಕ್ಕೆ ಗೈರುಹಾಜರಿ ಹೆಚ್ಚಾಗಬಹುದು.
ನಿಮಗೆ ಯಾವ ರೀತಿಯ ಕೆಲಸ ಇಷ್ಟ ಅಥವ ಇಷ್ಟವಿಲ್ಲ ಎಂಬುದನ್ನು ಗುರುತಿಸಿ
ಈವಾಗ ನಿಮಗೆ ಇರುವ ಅಗತ್ಯಗಳನ್ನು ಪರಿಶೀಲಿಸಿ
ನಿಮ್ಮಲ್ಲಿ ಯಾವ ಯಾವ ಕಲೆಗಳನ್ನು ಕಲಿತು ಬೆಳೆಸಬಹುದೆಂದು ಗುರುತಿಸಿ
ಸ್ವ ಇಚ್ಛೆಯಿಂದ ಕೆಲಸಕ್ಕೆ ಬೇಕಾದ ಶಿಕ್ಷಣವನ್ನು ಪಡೆದುಕೊಳ್ಳಿ
ಸದ್ಯಕ್ಕೆ ಇರುವ ಕೆಲಸವನ್ನು ಮುಂದುವರಿಸಲು ಸಾಧ್ಯವೇ ಆಗದಿ¨ªಾಗ ಹೊಸ ಕೆಲಸವನ್ನು ಹುಡುಕಲು ಪ್ರಯತ್ನಿಸಿ
ಮಾನಸಿಕ ತೊಂದರೆಗಳು ಇದ್ದಲ್ಲಿ ಮಾನಸಿಕ ತಜ°ರನ್ನು ಭೇಟಿಯಾಗಲು ಹಿಂಜರಿಯದಿರಿ
Related Articles
Advertisement
-ಶಾಲಿನಿ ಕ್ವಾಡ್ರಸ್, ಅಸಿಸ್ಟೆಂಟ್ ಪ್ರೊಫೆಸರ್,
ಅಕ್ಯುಪೇಶನಲ್ ಥೆರಪಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಣಿಪಾಲ.