ಹೊಸದಿಲ್ಲಿ: ಬಹಳಷ್ಟು ಸಮಯದಿಂದಲೂ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಟ್ಟಿನ ರಜೆ ಕುರಿತಾದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ದೇಶಾದ್ಯಂತ ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಬೇಕಾಗಿ ಕೋರಿ, ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಲಾಗಿದೆ.
ಶೈಲೇಂದ್ರ ಮಣಿ ತ್ರಿಪಾಠಿ ಎಂಬವರು ಜ.10 ರಂದು ಅರ್ಜಿ ಸಲ್ಲಿಸಿದ್ದು, ಓರ್ವ ಹೃದಯಸ್ತಂಭನವಾದ ವ್ಯಕ್ತಿ ಅನುಭವಿಸುವಷ್ಟೇ ನೋವು, ಮುಟ್ಟಾದ ಹೆಣ್ಣುಮಗಳಿಗೆ ಆಗುತ್ತದೆ ಎಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜೊಂದು ತನ್ನ ಅಧ್ಯಯನದಲ್ಲಿ ತಿಳಿಸಿರುವ ಅಂಶವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ. ಅರ್ಜಿ ವಿಚಾರಣೆಯನ್ನು ಇನ್ನೂ ಸುಪ್ರೀಂ ಕೈಗೆತ್ತಿಕೊಂಡಿಲ್ಲ.