Advertisement

ಪುರುಷರ ಹಾಕಿ ವಿಶ್ವಕಪ್‌: ಇಂದು ಸೆಮಿಫೈನಲ್‌ ಹೋರಾಟ

12:06 AM Jan 27, 2023 | Team Udayavani |

ಭುವನೇಶ್ವರ: ವಿಶ್ವದ ಅಗ್ರ ರ್‍ಯಾಂಕಿನ ನಾಲ್ಕು ತಂಡಗಳು ನಿರೀಕ್ಷೆಯಂತೆ ಎಫ್ಐಎಚ್‌ ಪುರುಷರ ಹಾಕಿ ವಿಶ್ವಕಪ್‌ ಕೂಟದ ಸೆಮಿಫೈನಲ್‌ ಹಂತಕ್ಕೆ ತಲುಪಿವೆ. ಆಸ್ಟ್ರೇಲಿಯ, ಜರ್ಮನಿ, ನೆದರ್ಲೆಂಡ್ಸ್‌ ಮತ್ತು ಬೆಲ್ಜಿಯಂ ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಹೋರಾಡಲಿದ್ದು ಯಾರು ಪ್ರಶಸ್ತಿ ಸುತ್ತಿಗೆ ನೆಗೆಯುತ್ತಾರೆಂದು ಊಹಿಸಲು ಕಷ್ಟಸಾಧ್ಯವಾಗಿದೆ.

Advertisement

ವಿಶ್ವದ ನಂ.1 ಆಸ್ಟ್ರೇಲಿಯ ತಂಡವು ನಾಲ್ಕನೇ ರ್‍ಯಾಂಕಿನ ಜರ್ಮನಿಯನ್ನು ಮೊದಲ ಸೆಮಿಫೈನಲ್‌ ಹೋರಾಟದಲ್ಲಿ ಎದುರಿಸಲಿದೆ. ಹಾಲಿ ಚಾಂಪಿಯನ್‌ ಬೆಲ್ಜಿಯಂ ತಂಡವು ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ ಅಪ್‌ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಈ ಹೋರಾಟವು ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ನಾಲ್ಕು ತಂಡಗಳಲ್ಲಿ ಮೂರು ಬಾರಿಯ ಚಾಂಪಿಯನ್‌ ಮತ್ತು ಮೂರನೇ ರ್‍ಯಾಂಕಿನ ನೆದರ್ಲೆಂಡ್ಸ್‌ ತಂಡವು ಸುಲಭವಾಗಿ ಗೆದ್ದು ಸೆಮಿಫೈನಲ್‌ ಹಂತಕ್ಕೆ ತಲುಪಿದ ಸಾಧನೆ ಮಾಡಿದೆ. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅದು ದಕ್ಷಿಣ ಕೊರಿಯವನ್ನು 5-1 ಗೋಲುಗಳಿಂದ ಸೋಲಿಸಿತ್ತು. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಆದರೆ 2010ರ ಬಳಿಕ ಇದೇ ಮೊದಲ ಬಾರಿ ಅಂತಿಮ ನಾಲ್ಕರ ಸುತ್ತಿಗೆ ಏರಿರುವ ಜರ್ಮನಿ ಕ್ರಾಸ್‌ ಓವರ್‌ ಪಂದ್ಯದಲ್ಲಿ ಆಡಿ ಮುನ್ನಡೆದಿತ್ತು. ಉಳಿದ ಮೂರು ತಂಡಗಳು ಕ್ವಾರ್ಟರ್‌ಫೈನಲಿಗೆ ನೇರ ಪ್ರವೇಶ ಪಡೆದಿದ್ದವು.

ಭಾರತಕ್ಕೆ ಭಾರೀ ಜಯ
ಯುದ್ಧ ಮುಗಿದ ಮೇಲೆ ಕೋಟೆ ಬಾಗಿಲು ಹಾಕಿದ ಸ್ಥಿತಿ ಭಾರತದ್ದಾಗಿದೆ. ಮಹತ್ವದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಕೈಚೆಲ್ಲಿದ್ದ ಭಾರತ, ಗುರುವಾರ 9ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್‌ ವಿರುದ್ಧ 8-0ಯಿಂದ ಗೆಲುವು ಸಾಧಿಸಿದೆ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next