ಭುವನೇಶ್ವರ: ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಪುರುಷರ ಎಫ್ಐಎಚ್ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ದಿನಗಣನೆ ಆರಂಭಗೊಂಡಿದೆ.
ಒಡಿಶಾ ರಾಜ ಧಾನಿ ಭುವನೇಶ್ವರದಲ್ಲಿ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದ್ದು, ಸೋಮವಾರ ಟ್ರೋಫಿಯ ಸಂಚಾರ ಆರಂಭಗೊಂಡಿತು. ಒಡಿಶಾ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಅವರು ಈ ಟ್ರೋಫಿಯನ್ನು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ಒದಗಿಸಿದರು.
“ಈ ಟ್ರೋಫಿ ದೇಶಾದ್ಯಂತ ವಿಶೇಷ ಸಂಚಲನ ಮೂಡಿಸಲಿದೆ. ಟ್ರೋಫಿಯ ಸುತ್ತಾಟ ಭರ್ಜರಿ ಯಶಸ್ಸು ಕಾಣಲಿ. ನಮ್ಮೆಲ್ಲರ ಪಾಲಿಗೆ ಇದೊಂದು ಸ್ಮರಣೀಯ ವಿಶ್ವಕಪ್ ಆಗಲಿ’ ಎಂದು ನವೀನ್ ಪಟ್ನಾಯಕ್ ಹಾರೈಸಿದರು.
ಮುಂದಿನ 21 ದಿನಗಳಲ್ಲಿ ಈ ಟ್ರೋಫಿ 13 ರಾಜ್ಯಗಳಲ್ಲಿ ಸಂಚರಿಸಿ ಡಿ. 25ರಂದು ಒಡಿಶಾಕ್ಕೆ ಮರಳಲಿದೆ. ಇಲ್ಲಿಗೆ ಆಗಮಿಸಿದ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಲಿದೆ. ಬಳಿಕ “ಕಳಿಂಗ ಸ್ಟೇಡಿಯಂ’ಗೆ ಆಗಮಿಸಲಿದೆ.
ಒಡಿಶಾದ ಕ್ರೀಡಾ ಸಚಿವ ತುಷಾರ್ಕಾಂತಿ ಬೆಹೆರಾ ಮತ್ತು ಹಾಕಿ ಇಂಡಿಯಾದ ಮಹಾ ಕಾರ್ಯದರ್ಶಿ ಭೋಲನಾಥ್ ಸಿಂಗ್ ಉಪಸ್ಥಿತರಿದ್ದರು.
Related Articles
ವಿಶ್ವಕಪ್ ಹಾಕಿ ಪಂದ್ಯಾವಳಿ ಜ. 13ರಿಂದ ಜ. 29ರ ತನಕ ನಡೆಯಲಿದೆ.