ಮುಂಬಯಿ: ಕಟಪಾಡಿ ಕೋಟೆಯ ಮೆಂಡನ್ ಮೂಲಸ್ಥಾನದ ಎಲ್ಲಾ ಕಾಮಗಾರಿಯು ಸುಮಾರು ಶೇ. 95 ರಷ್ಟು ಪೂರ್ಣಗೊಂಡಿದ್ದು, ಇದೀಗ ವಾಹನ ನಿಲುಗಡೆಗೆ ಜಾಗ ನಿರ್ಮಿಸುವ ಕೆಲಸವು ನಡೆಯುತ್ತಿದೆ. ಸಮಿತಿಯ ಸದಸ್ಯತನವನ್ನು ಹೆಚ್ಚಿಸಿ, ಸಂಘಟನೆಯನ್ನು ಬಲಬಡಿಸಬೇಕು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಪ್ರತೀ ವರ್ಷ ನೀಡುವ ಉದ್ಧೇಶದಿಂದ ಸದ್ಯದಲ್ಲೇ ವಿದ್ಯಾನಿಧಿಯ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ಜಯ ಬಿ. ಮೆಂಡನ್ ನುಡಿದರು.
ಡಿ. 17 ರಂದು ಮೆಂಡನ್ ಮೂಲಸ್ಥಾನ ಕೋಟೆ ಕಟಪಾಡಿ ಮುಂಬಯಿ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ವ್ಯಾಸ್‌ವಾಡಿಯಲ್ಲಿ ನಡೆದ ವಾರ್ಷಿಕ ವಿಹಾರಕೂಟದಲ್ಲಿ ಸಂದರ್ಭದಲ್ಲಿ ನಡೆದ ಪ್ರಧಾನ ಸಭೆಯ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಇವರು, ಮುಂಬಯಿಯಲ್ಲಿ ನಮ್ಮ ಹಿರಿಯ ಪ್ರಧಾನ ಸಭೆಯ ಎಲ್ಲಾ ಪದಾಧಿಕಾರಿಗಳನ್ನು ಸಮ್ಮಾನಿಸಲು ಅವಕಾಶ ಸಿಕ್ಕಿರುವುದು ತಮ್ಮೆಲ್ಲರ ದೊಡ್ಡ ಭಾಗ್ಯವಾಗಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಎಲ್ಲ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ನುಡಿದರು.
ಸಮಾರಂಭದಲ್ಲಿ ಪ್ರಧಾನ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಮೆಂಡನ್, ಅಧ್ಯಕ್ಷ ಶ್ರೀಧರ ಮೈಂದನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಮೆಂಡನ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಮೆಂಡನ್, ಕೋಶಾಧಿಕಾರಿ ನಾರಾಯಣ ಮೆಂಡನ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ಮೆಂಡನ್, ಉಪಾಧ್ಯಕ್ಷರುಗಳಾದ ಪಿ. ಜೆ. ಮೆಂಡನ್ ಮತ್ತು ಚಂದ್ರಶೇಖರ್ ಮೆಂಡನ್, ಸದಾನಂದ ಮೆಂಡನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುರೇಶ್ ಮೆಂಡನ್, ದೇವರಾಜ್ ಮೆಂಡನ್, ಹರೀಶ್ ಜಿ. ಮೆಂಡನ್, ಅಶೋಕ್ ಮೆಂಡನ್, ಜಯಶ್ರೀ ಕಾಂಚನ್, ಮಹೇಶ್ ಸುವರ್ಣ, ಭವಾನಿ ಮೆಂಡನ್ ಮೊದಲಾದವರನ್ನು ಮುಂಬಯಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಮ್ಮಾನಿಸಿದರು. ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿದರು.
ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಕೆ. ಪಿ. ಮೆಂಡನ್ ಮುಂಬಯಿ ಸಮಿತಿಯ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಂಬಯಿ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿ ಗಣನೀಯ ಸಾಧನೆ ಹಾಗೂ ಸೇವೆಗೈದ ಕೆ. ಪಿ. ಮೆಂಡನ್, ಶೇಖರ್ ಮೆಂಡನ್, ಎಸ್. ಕೆ. ಉಚ್ಚಿಲ್, ನಾಗೇಶ್ ಮೆಂಡನ್, ಎನ್. ಜೆ. ಮೆಂಡನ್‌ಗಳನ್ನು ದಂಪತಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಸುನಿತಾ ಮೆಂಡನ್ ಅವರ ಮುಂದಾಳತ್ವದಲ್ಲಿ ಆಟೋಟ ಸ್ಪರ್ಧೆಗಳು ನಡೆಯಿತು. ಆನಂತರ ಬಹುಮಾನ ವಿತರಣೆ ನಡೆಯಿತು. ಎನ್. ಜೆ. ಮೆಂಡನ್ ಸ್ವಾಗತಿಸಿದರು. ಪ್ರಾರ್ಥನೆಯೊಂದಿಗೆ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಜಯರಾಮ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು. ಎನ್. ಜಿ. ಮೆಂಡನ್, ಡಿ. ಎಸ್. ಮೆಂಡನ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮೆಂಡನ್ ಮೂಲಸ್ಥಾನ ಸದಸ್ಯರು ಉಪಸ್ಥಿತರಿದ್ದರು.