Advertisement

ಪುದುವೆಟ್ಟು: ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

03:21 PM Jul 04, 2022 | Team Udayavani |

ಬೆಳ್ತಂಗಡಿ: ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಮಡ್ಯ ಎಂಬಲ್ಲಿ ಸೋಮವಾರ (ಜು.4) ಪತ್ತೆಯಾಗಿದೆ.

Advertisement

ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65)  ಮೃತ ದುರ್ದೈವಿ.

ಲಿಂಗಪ್ಪ ಅವರು ಜೂ. 30ರಂದು ತೋಟಕ್ಕೆ ಹೋದ ಬಳಿಕ ನಾಪತ್ತೆಯಾಗಿದ್ದು, ಹೊಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹೊಳೆ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಕಂಡುಬಂದಿರಲಿಲ್ಲ. ಸೋಮವಾರ ಅವರ ಮೃತದೇಹ ತೋಟದಿಂದ ಒಂದೂವರೆ ಕಿ.ಮೀ ಕೆಳಭಾಗದ ಮಡ್ಯ ಎಂಬಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: ಕೊಳ್ಳೇಗಾಲ: ಎರಡು ದಿನದ ಗಂಡು ಮಗುವನ್ನು ಕಸದ ರಾಶಿಗೆ ಎಸೆದ ತಾಯಿ

ಘಟನೆ ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪಿ‌.ಎಸ್.ಐ.ಎ.ಕೃಷ್ಣಕಾಂತ ಪಾಟೀಲ್ ಮತ್ತು ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next