Advertisement

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಇಬ್ಬರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹ

11:36 AM May 11, 2022 | Team Udayavani |

ಕುಷ್ಟಗಿ: ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಇಬ್ಬರು ಪುರಸಭೆ ಸದಸ್ಯರ ಸದಸ್ಯತ್ವವನ್ನು ಪಕ್ಷಾಂತರ‌ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಲಾಗಿದೆ.

Advertisement

23 ಸದಸ್ಯ ಬಲದ ಕುಷ್ಟಗಿ ಪುರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 8 ಹಾಗೂ ಇಬ್ಬರು‌ ಪಕ್ಷೇತರರು ಹಾಗೂ ಓರ್ವ ಅಭ್ಯರ್ಥಿ ಅವಿರೋಧ ಅಯ್ಕೆಯಾಗಿದ್ದರು. ಕಾಂಗ್ರೆಸ್ ಗೆ ಅಧಿಕಾರದ ಗದ್ದುಗೆಗೇರುವ ಅರ್ಹತೆ ಇದ್ದರೂ, ಕಾಂಗ್ರೆಸ್ ನ ಇಬ್ಬರು ಸದಸ್ಯರಾದ 17ನೇ ವಾರ್ಡ್‌ ಸದಸ್ಯ ವೀರೇಶಗೌಡ ಬೆದವಟ್ಟಿ ಹಾಗೂ 3ನೇ ವಾರ್ಡ್ ಸದಸ್ಯೆ ಗೀತಾ ತುರಕಾಣಿ ಬಿಜೆಪಿಗೆ ಬೆಂಬಲಿಸಿದ್ದರು.

ಈ ಬೆಳವಣಿಗೆಯಿಂದ ಎರಡನೇ ಸ್ಥಾನದಲ್ಲಿದ್ದ ಬಿಜೆಪಿ ತನ್ನ 8 ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಅವಿರೋಧ ಆಯ್ಕೆಯಾಗಿದ್ದ ಒಬ್ಬರು ಸೇರಿದಂತೆ ಮೂವರು ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತರೊಂದಿಗೆ 13 ಸದಸ್ಯ ಬಲದೊಂದಿಗೆ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಗಂಗಾಧರಸ್ವಾಮಿ ಹಿರೇಮಠ ಗದ್ದುಗೆ ಅಲಂಕರಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಸ್ವಪಕ್ಷೀಯರಿಗೆ ಮುಖ ಭಂಗ ಮಾಡಿದ್ದ ಇಬ್ಬರು ಪಕ್ಷಾಂತರಿ ಸದಸ್ಯರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅಡಿ, ಸದರಿ ಸದಸ್ಯರ‌ ಸದಸ್ಯತ್ವ ರದ್ದತಿಗೆ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳು ಈ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿ ಪುರಸಭೆ ಸದಸ್ಯ ವೀರೇಶಗೌಡ ಬೆದವಟ್ಟಿ, ಗೀತಾ ತುರಕಾಣಿ ಸದಸ್ಯತ್ವನ್ನು ಅನರ್ಹಗೊಳಿಸಿದ್ದಾರೆ. ಈ ಬೆಳವಣಿಗೆಯಿಂದ ಬಿಜೆಪಿ ಸದಸ್ಯ ಬಲ 11ಕ್ಕೆ ಕುಗ್ಗಿದಂತಾಗಿದೆ.

ಇದನ್ನೂ ಓದಿ:ಸಂಪುಟ ವಿಸ್ತರಣೆ: ಅಮಿತ್ ಶಾ ಭೇಟಿಯಾಗಲು ಸಿಎಂಗೆ ಅವಕಾಶ

Advertisement

ಪುರಸಭೆ ಅನರ್ಹ ಸದಸ್ಯ ವೀರೇಶಗೌಡ ಬೆದವಟ್ಟಿ ಪ್ರತಿಕ್ರಿಯಿಸಿ ಸದಸ್ಯತ್ವ ರದ್ದತಿ ಆದೇಶ ಪ್ರಶ್ನಿಸಿ ತಡೆಯಾಜ್ಞೆಗೆ ಧಾರವಾಡದಲ್ಲಿರುವ ಹೈ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next