Advertisement

ಒಂದೇ ಮನೆಯ ಸದಸ್ಯರು ಬೇರೆ-ಬೇರೆ ವಾರ್ಡ್‌ ಮತದಾರರು!

01:35 PM Dec 20, 2020 | Suhan S |

ಉಡುಪಿ, ಡಿ. 19: ಜಿಲ್ಲೆಯ 154 ಗ್ರಾ.ಪಂ.ಗಳ ಚುನಾವಣೆಯಲ್ಲಿ ಈ ಬಾರಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡುವ ಸಾಧ್ಯತೆಗಳು ಕಂಡು ಬರುತ್ತಿದೆ. ಚುನಾವಣ ಆಯೋಗದ ಎಡವಟ್ಟಿನಿಂದ ಒಂದೇ ಮನೆಯ ಸದಸ್ಯರು ಬೇರೆ- ಬೇರೆ ವಾರ್ಡ್‌ನ ಮತದಾರರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ವಿವಿಧ ಗ್ರಾ.ಪಂ.ಗಳಲ್ಲಿ ಒಂದೇ ಕುಟುಂಬದ ಹಲವರ ಹೆಸರು ಬೇರೆ ಬೇರೆ ಮತಗಟ್ಟೆಯಲ್ಲಿ ಸೇರಿರುವುದರಿಂದ ಅವರೆಲ್ಲರೂ ಮತದಾನದಿಂದ ದೂರವೇ ಉಳಿಯಬೇಕಾಗೀತು ಎನ್ನುವ ಅನುಮಾನ ಕಾಡುತ್ತಿದೆ. ವಿಶೇಷವಾಗಿ ಒಂದೇ ಮನೆಯ ಮತದಾರರ ಹೆಸರು ಬೇರೆ ಬೇರೆ  ವಾರ್ಡ್‌ನ ಮತಗಟ್ಟೆಯಲ್ಲಿ ಸೇರಿಕೊಂಡಿರು ವುದು ಗೊಂದಲಕ್ಕೆ ಎಡೆಮಾಡಿದೆ.

ಬೇರೆ ವಾರ್ಡ್‌ ಮತ :

ಆಯೋಗದ ಎಡವಟ್ಟಿನಿಂದಾಗಿ ಈ ಬಾರಿ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಗೆಲುವಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳು ಕಾಣುತ್ತಿದೆ. ಉದಾಹರಣೆಗೆ “ಎ’ ಗ್ರಾಮದ 2ನೇ ವಾರ್ಡ್‌ನ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಮತ “ಎ’ ಗ್ರಾಮದ 3ನೇ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಸ್ಪರ್ಧೆಗೆ ನಿಂತ ಅಭ್ಯರ್ಥಿ ತನ್ನ ಬದಲಾಗಿ ಇನ್ನೊಂದು  ವಾರ್ಡ್‌ನ ಅಭ್ಯರ್ಥಿಗೆ ಮತ ಚಲಾಯಿಸಬೇಕಾಗಿದೆ. ಇದರಿಂದ ಈ ಅಭ್ಯರ್ಥಿಗೆ ಚುನಾವಣೆಯಲ್ಲಿ ಒಂದು ಮತದಿಂದಲಾದರೂ ಸೋಲು- ಗೆಲುವುಗಳಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇನ್ನಷ್ಟು  ತಡವಾಗಲಿದೆ :

Advertisement

ಪ್ರತಿ ಬಾರಿ ಗ್ರಾ.ಪಂ. ಚುನಾವಣೆ ಮಧ್ಯಾಹ್ನದ ಹೊತ್ತಿಗೆ ಶೇ. 60ರಷ್ಟು ಮತದಾನ ಮುಗಿದಿರುತ್ತಿತ್ತು. ಆದರೆ ಈ ಬಾರಿ ಬೇಗ ಮುಗಿಯುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಒಂದು ಮನೆಯವರ ಹೆಸರು 1 ಕ್ರ.ಸಂ.ಯಲ್ಲಿ ಇದ್ದರೆ ಇನೋರ್ವ ಸದಸ್ಯ 100, 900ನೇ ಕ್ರಮ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ಹೆಸರು ಹುಡುಕಾಟದಲ್ಲಿ ಸಮಯ ವ್ಯತ್ಯಯವಾಗಲಿದೆ. ಜತೆಗೆ ಈ ಕೊರೊನಾ ಸಂದರ್ಭದಲ್ಲಿ ಜನರು ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.

ಮತಗಳು ವರ್ಗಾವಣೆ! :

ಹೆಬ್ರಿ ತಾಲೂಕಿನ ಕುಚ್ಚಾರು 1ನೇ ವಾರ್ಡ್‌ನ 120 ಮತಗಳನ್ನು (30 ಮತದಾರರು) 2ನೇ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಅಲ್ಲಿನ 30 ಮತಗಳನ್ನು (10 ಮತದಾರರನ್ನು) 1ನೇ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಇಂತಹ ತಪ್ಪು ಕೇವಲ ಹೆಬ್ರಿ ಮಾತ್ರವಲ್ಲದೆ ಜಿಲ್ಲೆಯ ಇತರ ತಾಲೂಕುಗಳ ವಿವಿಧ ಗ್ರಾ.ಪಂ.ಗಳಲ್ಲಿ ವರದಿಯಾಗಿದೆ. ಜತೆಗೆ ಒಬ್ಬರ ಮನೆ ಸಂಖ್ಯೆಯಲ್ಲಿ ಬೇರೊಬ್ಬರ ಹೆಸರುಗಳನ್ನು ಸೇರಿಸಲಾಗಿದೆ.

ಅಕ್ರಮಕ್ಕೆ ದಾರಿ ! : ಪ್ರಸ್ತುತ ಒಂದು ವಾರ್ಡ್‌ನಿಂದ ಇನ್ನೊಂದು ವಾರ್ಡ್‌ಗೆ ಮತಗಳು ವರ್ಗಾವಣೆ ಆಗಿರುವುದರಿಂದ ಅಭ್ಯರ್ಥಿ ಅಂತಹ ಮನೆಗಳನ್ನು ಹುಡುಕಿಕೊಂಡು ಹೋಗಿ ಮತ ಬದಲಾಯಿಸಲು ಮನವಿ ಮಾಡುತ್ತಿದ್ದಾರೆ. ನಾವು ನಿಮ್ಮ ಅಭ್ಯರ್ಥಿಗಳಿಗೆ ಮತ ಹಾಕುತ್ತೇವೆ. ನೀವು ನಮ್ಮ ಅಭ್ಯರ್ಥಿಗೆ ಮತ ಹಾಕಿ ಎನ್ನುವ ಒಳ ಒಪ್ಪಂದಗಳು ಗ್ರಾ.ಪಂ. ಚುನಾವಣೆಯಲ್ಲಿ ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿವೆೆ. ಜತೆಗೆ ಹಣ ನೀಡಿ ಮತ ಖರೀದಿ ಮಾಡುತ್ತಿರುವ ಗುಮಾನಿಗಳಿವೆ.

ಮತದಾರರ ಸಂಖ್ಯೆ ಹೆಚ್ಚಳವಾಗಿ ಬೇರೆ ಮತಗಟ್ಟೆಗೆ ಸೇರ್ಪಡೆಗೊಳಿಸಿದ್ದರೆ ಸರಿ ಎನ್ನಬಹುದಿತ್ತು. ಆದರೆ ವಾರ್ಡನ್ನೇ ಬದಲಾಯಿಸ ಲಾಗಿದೆ. ಅದೂ ಒಂದೇ ಮನೆಯವರನ್ನೇ ಬೇರೆ-ಬೇರೆ ವಾರ್ಡ್‌ಗೆ ಹಾಕಿದರೆ ಹೇಗೆ? ಶೀಘ್ರದಲ್ಲಿ ಸಮಸ್ಯೆ ಬಗ್ಗೆ ಗಮನಹರಿಸಬೇಕು.-ಎಚ್‌. ರಾಜೀವ್‌ ಶೆಟ್ಟಿ ಕುಚ್ಚಾರು , ಹೆಬ್ರಿ ತಾಲೂಕು

ಒಂದೇ ಮನೆ ಸದಸ್ಯರು ಬೇರೆ- ಬೇರೆ ವಾರ್ಡ್‌ನ ಮತದಾರರಾಗಿ ಬದಲಾಗಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಗಮನ ಹರಿಸಲಾಗುತ್ತದೆ. -ಜಿ.ಜಗದೀಶ್‌, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next