Advertisement
“ಮುಕ್ಕೂರು ಅಂಚೆ ಕಚೇರಿ ದಿಢೀರ್ ಸ್ಥಳಾಂತರ’ ಕುರಿತು ಉದಯವಾಣಿ ಸುದಿನ ಮೇ 27ರಂದು ವರದಿ ಪ್ರಕಟಿಸಿತ್ತು. ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಸಂಸದರು, ತತ್‌ಕ್ಷಣ ಈ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳನ್ನು ಸಂಪ ರ್ಕಿಸಿ ಮಾಹಿತಿ ಪಡೆದು, ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಿದ್ದನ್ನು ರದ್ದುಗೊಳಿಸಿ, ಮುಕ್ಕೂರಿನಲ್ಲೇ ಅಂಚೆ ಕಚೇರಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಹಾಲಿ ಕಟ್ಟಡ ಶಿಥಿಲಗೊಂಡಿದ್ದರೆ ಸ್ಥಳಾಂತರಕ್ಕೆ ಮುಕ್ಕೂರಿನಲ್ಲೇ ಪರ್ಯಾಯ ಕಟ್ಟಡದ ವ್ಯವಸ್ಥೆ ಇದೆ. ಅದನ್ನು ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಕ್ಕೂರಿನ ಅಂಚೆ ಕಚೇರಿಯನ್ನು ದಿಢೀರ್ ಆಗಿ ಪೆರುವಾಜೆ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಿಸಿರುವ ವಿಚಾರ ತಿಳಿದ ತತ್‌ಕ್ಷಣ ಅಂಚೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅದನ್ನು ಮತ್ತೆ ಮುಕ್ಕೂರಿನಲ್ಲೇ ಉಳಿಸುವಂತೆ ಸೂಚಿಸಿದ್ದೇನೆ. ಹಾಲಿ ಕಟ್ಟಡ ಶಿಥಿಲವಾಗಿರುವ ಕಾರಣ ಮುಕ್ಕೂರಿನಲ್ಲಿ ಲಭ್ಯವಿರುವ ಬೇರೆ ಕಟ್ಟಡದಲ್ಲಿ 10 ದಿನಗಳೊಳಗೆ ಅಂಚೆ ಕಚೇರಿ ಮುಕ್ಕೂರಿನಲ್ಲಿ ಮತ್ತೆ ಆರಂಭಗೊಳ್ಳಲಿದೆ.
– ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ. ಲೋಕಸಭಾ ಕ್ಷೇತ್ರ