Advertisement

ಪಾಕಿಸ್ಥಾನದ‌ಲ್ಲಿ ಮತಾಂತರ, ಅಪಹರಣಕ್ಕೆ ಭಾರೀ ವಿರೋಧ

12:59 AM Mar 14, 2023 | Team Udayavani |

ಕರಾಚಿ: ಅಪಹರಣ, ಬಲವಂತದ ಮತಾಂತರ, ಅಪ್ರಾಪ್ತ ವಯಸ್ಕ ಯುವತಿಯರನ್ನು ಬಲವಂತವಾಗಿ ಮದುವೆಯಾಗುವುದು ಸೇರಿದಂತೆ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಟಾಳಿಕೆ ವಿರುದ್ಧ; ಪಾಕಿಸ್ಥಾನದ ಸಿಂಧ್‌ ವಿಧಾನಸಭೆ ಕಟ್ಟಡದ ಎದುರು ಮಾ.30ರಂದು ಹಿಂದೂ ಸಮುದಾ ಯುವು ಬೃಹತ್‌ ರ‍್ಯಾಲಿ ಆಯೋಜಿಸಿದೆ.

Advertisement

ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ “ಪಾಕಿಸ್ತಾನ್‌ ದಾರಾ ವರ್‌ ಇತ್ತೆಹಾದ್‌’ ವತಿಯಿಂದ ಈ ರ‍್ಯಾಲಿ ಆಯೋಜಿಸಲಾಗಿದೆ. ಇದರಲ್ಲಿ ಹಿಂದೂ ಸಮುದಾಯದ ಅನೇಕ ನಾಯಕರು ಭಾಗಿ ಯಾಗಲಿದ್ದಾರೆ. ರ‍್ಯಾಲಿ ಕುರಿತು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಈ ಕುರಿತು ಮಾಹಿತಿ ನೀಡಿದ ಪಾಕಿಸ್ತಾನ್‌ ದಾರಾವರ್‌ ಇತ್ತೆಹಾದ್‌ ಅಧ್ಯಕ್ಷ ಫ‌ಕರ್‌ ಶಿವ ಕೂಚಿ, “ಹಿಂದೂ ಸಮುದಾಯದವರ ಅಪಹರಣಗಳು, ಬಲವಂತದ ಮತಾಂತರ, ಮಹಿಳೆಯರು ಮತ್ತು ಬಾಲಕಿಯರ ನಕಲಿ ಮದುವೆಗಳ ಬಗ್ಗೆ ಪಾಕ್‌ ಸರಕಾರ ಕುರುಡಾಗಿದೆ.

ಈ ಬಗ್ಗೆ ಅರಿವು ಮೂಡಿಸಲು ರ‍್ಯಾಲಿ ಆಯೋಜಿಸಲಾಗಿದೆ. ಅಲ್ಲದೇ ಬಲವಂತದ ಮತಾಂತರ ಮತ್ತು ಮದುವೆಗಳ ವಿರುದ್ಧ ಕಠಿಣ ಕಾನೂನು ತರಬೇಕೆಂಬುದು ನಮ್ಮ ಆಗ್ರಹ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next