Advertisement

ಮೀಸಲಾತಿ ನಿರೀಕ್ಷೆಯಲ್ಲಿ ಪುರಸಭೆ ಸದಸ್ಯರು

04:18 PM May 23, 2023 | Team Udayavani |

ದೇವನಹಳ್ಳಿ: ಪುರಸಭೆಯ ಮೊದಲನೆ ಅವಧಿಯ ಅಧಿಕಾರಾವಧಿ ಮುಕ್ತಯಗೊಂಡಿದ್ದು, 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಧಿಯು ಮೇ 5ಕ್ಕೆ ಅವಧಿ ಪೂರ್ಣಗೊಂಡಿದೆ.

Advertisement

ದೇವನ ಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್‌ 10, ಜೆಡಿಎಸ್‌ 7, ಪಕ್ಷೇತರರು 3, ಬಿಎಸ್‌ಪಿ1, ಬಿಜೆಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್‌ಗೆ ಹಾಗೂ ಬಿಎಸ್‌ಪಿ 1, ಇಬ್ಬರು ಪಕ್ಷೇ ತರರು ಕಾಂಗ್ರೆಸ್‌ಗೆ ನಿಲುವು ತೋರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ 13 ಸ್ಥಾನಗಳು ಬರಬೇಕಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗಳನ್ನು ನಡೆಸಿದ್ದರು. ಕಳೆದ ಮೊದಲ ಅವಧಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಗಿದ್ದರೆ ಜೆಡಿಎಸ್‌ ಉಪಾಧ್ಯಕ್ಷರಾಗಿದ್ದರು. 15 ತಿಂಗಳ ಅವಧಿಯಲ್ಲಿ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಮಧ್ಯೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ಸಮುದಾಯಗಳಿಗೆ ಒಲಿಯಲಿದೆ ಎಂದು ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ. ಇದು ಪುರಸಭೆಯಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುವುದು ಸಾರ್ವ ಜನಿಕ ವಲಯದಲ್ಲಿ ಪ್ರಶ್ನೆಗೆ ಗ್ರಾಸವಾಗಿದೆ.

ಈಗ ಕಾಂಗ್ರೆಸ್‌ ಶಾಸಕರು ಗೆದ್ದಿರುವುದರಿಂದ ಕಾಂಗ್ರೆಸ್‌ನ ಮತವೂ ಸಹ ಕಾಂಗ್ರೆಸ್‌ಗೆ ಲಭಿಸಲಿದೆ. ಜೆಡಿಎಸ್‌ ಕಾಂಗ್ರೆಸ್‌ ಹೊಂದಾಣಿಕೆ ಮುಂದುವರೆಯುತ್ತದೊ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಅಸ್ಪದವಾಗಿದೆ. ಮೇ 5ರಂದು ಅಧ್ಯಕ್ಷ ಸ್ಥಾನ ಮುಗಿದಿದ್ದು ಇನ್ನೂ ಆಡಳಿತಾಧಿಕಾರಿ ನೇಮಕವಾಗಬೇಕು. ಸರ್ಕಾರದ ಮಟ್ಟದಲ್ಲಿ ಈಗ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಯಾವ ಮೀಸಲಾತಿ ಬಂದರೆ ಅನುಕೂಲವಾಗುತ್ತದೆ ಎಂಬ ಚಿಂತನೆಗಳು ನಡೆಯುತ್ತಿವೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಯಾವ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯೋಗ ಕೂಡಿಬರಲಿದೆ ಎಂಬುವುದು ಸಾರ್ವಜನಿಕರ ಕುತೂಹಲ ಕೆರಳಿಸಿದೆ.

Advertisement

2ನೇ ಅವಧಿ ಮೀಸಲಾತಿ ಪ್ರಕಟವಾಗಿಲ್ಲ: ಪುರ ಸಭೆಯ 2ನೇ ಅವಧಿ ಮೀಸಲಾತಿ ಪ್ರಕಟ ವಾಗಿಲ್ಲವಾದರೂ ಆಕಾಂಕ್ಷಿಗಳು ಮಾತ್ರ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪುರಸಭೆ ಯಲ್ಲಿ 23 ಸದಸ್ಯರನ್ನು ಒಳಗೊಂಡಿದ್ದು ಕ್ಷೇತ್ರದ ಶಾಸಕರು ಹಾಗೂ ಸಂಸದರು ಮತ ಸೇರಿ 25 ಮತ ಗಳಾಗಲಿವೆ. ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು 13 ಸ್ಥಾನಗಳು ಬೇಕಾಗಿ ರುತ್ತವೆ. ಮೀಸಲಾತಿ ಪ್ರಕಟಗೊಂಡ ಬಳಿಕವಷ್ಟೇ ತಿಳಿಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next