Advertisement
ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ನೆಡೆಯುತ್ತಿದ್ದ ಮುಸುಕಿನ ಗುದ್ದಾಟ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದರಲ್ಲೂ ಅಲ್ಲಿನ ಅಭಿವೃದ್ಧಿ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕು ಇಲ್ಲದಿದ್ದರೆ ಗ್ರಾಮಪಂಚಾಯಿತಿಗೆ ಬರುವುದಿಲ್ಲ ಎಂದು ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಹೇಳಿದ್ದರು. ಇದರಿಂದ ಗ್ರಾಮಪಂಚಾಯಿತಿ ಆವರಣದಲ್ಲಿ ಸೋಮವಾರ ಸಾರ್ವಜನಿಕರಿಂದ ಪ್ರತಿಭಟನೆ ಕೂಡ ನೆಡೆದಿತ್ತು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಕೆಲವು ಸದಸ್ಯರು ಈಓ ಬಳಿ ಹೋಗಿ ಪಿಡಿಓ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದ್ದೂ ಈಓ ವಿಷಯವನ್ನು ಹಿಂದೂ ಮುಂದೆ ನೋಡದೆ ರಾತ್ರೋ ರಾತ್ರಿ ಪಿಡಿಓ ಅವರನ್ನು ತಾಲೂಕು ಪಂಚಾಯತ್ ಕಚೇರಿಗೆ ವರ್ಗಾವಣೆ ಮಾಡಲು ಆದೇಶ ಮಾಡಿದ್ದರು. ಗೃಹಸಚಿವರ ಆದೇಶ – ವರ್ಗಾವಣೆ ವಾಪಾಸ್
ಈ ವಿಷಯ ತಿಳಿದ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಅನಿಲ್ ಅವರು ಗೃಹಸಚಿವರಿಗೆ ಮಾಹಿತಿ ನೀಡಿ ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ಪಿಡಿಓ ದಕ್ಷ ಅಧಿಕಾರಿಯಾಗಿದ್ದು ಅವರನ್ನು ವರ್ಗಾವಣೆ ಮಾಡಲು ಆದೇಶಿಸಿದ್ದಾರೆ. ಈ ರೀತಿ ಮಾಡಬಾರದು ಎಂದು ಗೃಹಸಚಿವರ ಬಳಿ ಮನವಿ ಮಾಡಿದ್ದರು. ನಂತರ ಗೃಹಸಚಿವರು ಈಓ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ತಾವೇ ನೀಡಿದ್ದ ಆದೇಶವನ್ನು ಈಓ ವಾಪಾಸ್ ಪಡೆದಿದ್ದಾರೆ. ಒಟ್ಟಿನಲ್ಲಿ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿಯಲ್ಲಿ ರಾತ್ರೋ ರಾತ್ರಿ ಹೈಡ್ರಾಮ ನೆಡೆದಿದೆ.