ವಾಷಿಂಗ್ಟನ್ : ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸಿದ ನಂತರ ಅವರ ಪತ್ನಿ, ಅಮೇರಿಕಾದ ಮಾಜಿ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಸಾಮಾಜಿಕ ವಲಯದಿಂದ ದೂರ ಉಳಿದಿದ್ದಾರೆ.
ಜನವರಿ 20 ರಂದು ಜೋ ಬೈಡನ್ ಅವರು ಅಮೇರಿಕಾದ ಅಧ್ಯಕ್ಷ ಪಟ್ಟ ಸ್ವೀಕಾರ ಕಾರ್ಯಕ್ರಮದಲ್ಲಿ ಮೆಲನಿಯಾ ಕಾಣಿಸಿಕೊಂಡದ್ದನ್ನು ಹೊರತಾಗಿ ಬೇರೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ.
ಓದಿ : ಹಗ್ ಡೇ : ಅಪ್ಪುಗೆ ಕೇವಲ ಅಪ್ಪುಗೆಯಷ್ಟೇ ಅಲ್ಲ…
ಪತಿ ಟ್ರಂಪ್, ಶ್ವೇತಭವನದಿಂದ ಹೊರಗೆ ಬಂದ ಮೇಲೆ ಮೆಲನಿಯಾ ತುಸು ಬೇಸರಗೊಂಡಂತೆ ಕಾಣಿಸುತ್ತಿದೆ. ಮೆಲನಿಯಾ ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ.
ಮೆಲನಿಯಾ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ವೇತ ಭವನದ ನಿರ್ಗಮನದ ಕೊನೆಯ ಸಂದೇಶವನ್ನು ಹೊರತು ಪಡಿಸಿ ಉಳಿದ ಎಲ್ಲಾ ಪೋಸ್ಟ್ ಗಳು ಡಿಲೀಟ್ ಆಗಿವೆ.
ಅಧ್ಯಕ್ಷ ಪಟ್ಟದಿಂದ ಟ್ರಂಪ್ ಕೆಳಗಿಳಿದ ನಂತರ ಇತ್ತೀಚೆಗೆ ಸೂಪರ್ ಬೌಲ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು, ಆದರೇ, ಮೆಲನಿಯಾ ಅವರೊಂದಿಗೆ ಹಾಜರಿರಾಗದೇ ಇರುವುದು ಈಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಓದಿ : ವಿಮಾ ದಾಖಲೆಗಳಿಗೆ ಸುರಕ್ಷತೆ ನೀಡಲಿದೆ “DigiLocker”
ಇನ್ನು, ತನ್ನ ಪತಿಯೊಂದಿಗೆ ಮೆಲನಿಯಾ ಕಾಣಿಸಿಕೊಳ್ಳದಿರುವುದರಿಂದ, ಪತಿ ಪತ್ನಿಯವರ ನಡುವೆ ಒಡಕು ಉಂಟಾಗಿರಬಹುದು ಎಂಬ ವದಂತಿಗಳು ಹರಿದಾಡುತ್ತಿವೆ ಎಂಬುವುದನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನವೆಂಬರ್ 3 ರಂದು ಡೊನಾಲ್ಡ್ ಟ್ರಂಪ್, ಜೋ ಬೈಡನ್ ವಿರುದ್ಧ ನಡೆದ ಚುನಾವಣೆಯಲ್ಲಿ ಸೋತ ನಂತರ ಮೆಲನಿಯಾ ಡೊನಾಲ್ಡ್ ಟ್ರಂಪ್ ಅವರಿಗೆ ವಿಚ್ಛೇದನ ನೀಡಿದ್ದಾರೆ ಎಂದು ಹಲವು ಮಾಧ್ಯಮಗಳು ಸುದ್ದಿ ಮಾಡಿದ್ದವು.
ಆದರೇ, ಡೊನಾಲ್ಡ್ ಟ್ರಂಪ್ ಮತ್ತು ಮೆಲನಿಯಾ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವುದಕ್ಕೆ ಸೂಕ್ತ ಪುರಾವೆಗಳು ಇಲ್ಲದಿದ್ದರೂ, ಸಾರ್ವಜನಿಕ ವಲಯದಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ಮೆಲನಿಯಾ ಕಾಣಿಸಿಕೊಳ್ಳದೇ ಇರುವುದು ಮತ್ತು ಸಾಮಾಜಿಕ ಜಾಲತಾಣಗಳಿಂದ ಹೊರಬಂದಿರುವುದು ವದಂತಿಗಳು ಹಬ್ಬುವುದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಓದಿ :ಜೀವನದಲ್ಲಿ ವಿಶ್ವಾಸ ಕಳೆದುಕೊಂಡರೆ ಸಾಧನೆ ಅಸಾಧ್ಯ: ನಟ ಅಮೀರ್‌ಖಾನ್