Advertisement

ಮೆಕ್ಕೆಕಟ್ಟು ದೇಗುಲ: ಗೆಂಡಸೇವೆ, ಶಡಿ ಉತ್ಸವ ಸಂಪನ್ನ

02:17 PM Mar 16, 2018 | |

ಕೋಟ : ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಮಾ. 14ರಂದು ಆರಂಭಗೊಂಡಿತು. ಮಾ. 14ರಂದು ಗೆಂಡ ಸೇವೆ, ಹಾಲಿಟ್ಟು ಸೇವೆ, ಮಹಾಪೂಜೆ, ಡಮರು ಸೇವೆ ಹಾಗೂ ಮಾ. 15 ರಂದು ಶಡಿ ಉತ್ಸವ ನಡೆದವು.

Advertisement

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಣ್ಣ ಹೆಗ್ಡೆ, ಸದಸ್ಯ ಕೆ. ಗೋಪಾಲ ಶೆಟ್ಟಿ ಕೊಳ್ಕೆಬೈಲು, ಕಾಳು ಶಿರಿಯಾರ, ಸುಜಾತಾ ಪೂಜಾರಿ ಶಿರಿಯಾರ, ಭಾರತಿ ಎಸ್‌. ಹೆಗ್ಡೆ ಕೊಳ್ಕೆಬೈಲು, ಎ. ದಿವಾಕರ ಶೆಟ್ಟಿ ಜಂಬೂರು ಕೊಳ್ಕೆ ಬೈಲು ಹೊಸಮನೆ, ಪ್ರಸಾದ್‌ ಶೆಟ್ಟಿ ಕೊಳ್ಕೆಬೈಲು ನಡುಮನೆ, ನರಸಿಂಹ ಪೂಜಾರಿ ಶಿರಿಯಾರ ಹಾಜರಿದ್ದರು.

ವಿಶೇಷ ಶಡಿ ಸೇವೆ
ವಿಶೇಷ ಆಕರ್ಷಣೆಯಾದ ಶಡಿ ಸೇವೆ ಮಾ. 15ರಂದು ಜರಗಿತು. ಎತ್ತರದ 3 ಕಬ್ಬಿಣದ ಕಂಬಗಳಿಗೆ ಅಡ್ಡಲಾಗಿ 3 ಕಂಬಗಳನ್ನು ಜೋಡಿಸಿ ಅದರ ಒಂದು ತುದಿಗೆ ತೊಟ್ಟಿಲು ಅಳವಡಿಸಿ, ಹರಕೆ ಹೊತ್ತ ವ್ಯಕ್ತಿ ಯನ್ನು ಕುಳ್ಳಿರಿಸಿ ಇನ್ನೊಂದು ತುದಿಗೆ ಹಗ್ಗವನ್ನು ಕಟ್ಟಿ ತೊಟ್ಟಿಲನ್ನು ವೃತ್ತಾಕಾರವಾಗಿ ತಿರುಗಿಸುವ ಮೂಲಕ ಶಡಿ ಹರಕೆ ತೀರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next