ಚನ್ನರಾಯಪಟ್ಟಣ: ರಾಜ್ಯದಲ್ಲಿ ಮೈತ್ರಿ ಸರ್ಕಾರದ ಕನಸು ಕಾಣುವವರಿಗೆ ಮೇಕೆದಾಟು ಶಾಪವಾಗಿ ಪರಿಣಮಿಸಲಿದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ವ್ಯಂಗ್ಯವಾಡಿದರು. ತಾಲೂಕಿನ ಕಿರೀಸಾವೆ ಗಡಿ ಆಂಜನೇಯಸ್ವಾಮಿ ದೇವಾ ಲಯದಲ್ಲಿ ಮೇಕುದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಜೆಡಿಎಸ್ ನಿತ್ಯವೂ ಜಪ ಮಾಡುತ್ತಿದೆ. ಹೀಗಾಗಿ ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆಂದರು. ದೇವೇಗೌಡರ ಕುಟುಂಬಕ್ಕೆ ರಾಜ್ಯದಲ್ಲಿ ಒಂದು ಸರ್ಕಾರ ಅಧಿಕಾರಕ್ಕೆ ಬರುವುದು ಸುತಾರಾಂ ಇಷ್ಟವಿಲ್ಲ. ರಾಜ್ಯದಲ್ಲಿ 100ರ ಆಸುಪಾಸಿನಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಗೆಲುವು ಸಾಧಿಸಬೇಕು ಎಂಬ ಹರಕೆ ಹೊತ್ತಿದ್ದಾರೆ. ಇದರಿಂದ ದೇವೇಗೌಡ ಕುಟುಂಬ ಓರ್ವ ಮಗ ಮುಖ್ಯ ಮಂತ್ರಿಯಾಗಿ, ಮತ್ತೋರ್ವ ಮಗ ಮಂತ್ರಿಯಾಗಿ, ಮೊಮ್ಮ ಕ್ಕಳು, ಮಂತ್ರಿಗಳಾಗಿ ಸೊಸೆಯಂದಿರನ್ನು ಮಂತ್ರಿ ಮಾಡುವ ತವಕ ಅವರಲ್ಲಿದೆ ಎಂದು ಟೀಕಿಸಿದರು.
ರೈತರ ಏಳಿಗೆ ಬಯಸುವ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳು ಮೇಕೆದಾಟು ಯೋಜನೆ ವಿರೋಧಿಸುವು ದಿಲ್ಲ, ಆದರೆ ರೈತರ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರು ಅಧಿಕಾರವನ್ನು ರೈತರ ಮಕ್ಕಳಿಗೆ ನೀಡದೆ ಒಂದು ಕುಟುಂಬಕ್ಕೆ ನೀಡುತ್ತಾರೆ. ರೈತಪರವಾಗಿ ಜೆಡಿಎಸ್ ಹಾಗೂ ದೇವೇಗೌಡರು ಇದ್ದಿದ್ದರೆ ಮೇಕೆದಾಟು ಯೋಜನೆಗೆ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದರು ಎಂದು ಕಿಡಿಕಾರಿದರು. ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಮಾತನಾಡಿ, ಸಂಕ್ರಾತಿ ನಂತರ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿ ಬದಲಾವಣೆ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಲ್ಲೆಯ ಗಡಿಭಾಗವಾದ ಕಿರೀಸಾವೆಯಲ್ಲಿನ ಗಡಿ ಆಂಜ ನೇಯಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಮುಖಂ ಡರು, ಕಾರ್ಯಕರ್ತರು ಪೂಜೆ ನೆರವೇರಿಸಿ ಕನಕಪುರಕ್ಕೆ ಪ್ರಯಾಣ ಬೆಳೆಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರು, ಮುಖಂಡರಾದ ಜವರೇಗೌಡ, ಮೋಹನ್, ಮನೋಹರ್ ಕುಂಬೇನಹಳ್ಳಿ, ವಿಜಯಕುಮಾರ್, ಎಚ್.ಕೆ.ಮಹೇಶ್, ಬಾಗೂರು ಮಂಜೇಗೌಡ ಮತ್ತಿತರರಿದ್ದರು.