ನೀಗಿಸಬಲ್ಲ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಜಿಲ್ಲೆಯ ಜನತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದೃಷ್ಟಿ ನೆಟ್ಟಿದ್ದಾರೆ.
Advertisement
ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ಕರ್ಮ ಭೂಮಿ ರಾಮನಗರ, ಸಚಿವ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಸಹ ರಾಮನಗರ. ಇಬ್ಬರೂರಾಜ್ಯದ ಪ್ರಭಾವಿ ನಾಯಕರಾಗಿದ್ದು, ಅವರು ಇಚ್ಚಾಶಕ್ತಿ ತಳೆದು, ದೃಢ ಸಂಕಲ್ಪ ಮಾಡಿದರೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಷ್ಟದ ಕೆಲಸವೇನಲ್ಲ ಎಂಬುದು ಜನತೆಯ ವಿಶ್ವಾಸ.
ಡ್ಯಾಂ ನಿರ್ಮಿಸಿ ವಿದ್ಯುತ್ ಉತ್ಪಾದಿಸುವುದು, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡಕೊಳ್ಳು ವುದರ ಬಗ್ಗೆ 1963ರಲ್ಲೇ ಪ್ರಸ್ತಾಪವಾಗಿತ್ತು. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ 1996-97ನೇ ಸಾಲಿನಲ್ಲಿ ನಡೆದ ಸಭೆಯಲ್ಲೂ ಮೇಕೆದಾಟು ಯೋಜನೆ ಪ್ರಸ್ತಾಪವಾಗಿದೆ. ಈ ನಡುವೆ ಮೇಕೆದಾಟು ಹೋರಾಟ ಸಮಿತಿ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದೆ. ಅವರಂತೆ ನೀವಾಗಬೇಡಿ!: ಯೋಜನೆಗಾಗಿ ಧ್ವನಿ ಎದ್ದಾಗಲೆಲ್ಲ, ಏನಾದರೊಂದು ನೆಪವೊಡ್ಡಿ ಹೋರಾಟ ಗಾರರ ಬಾಯಿ ಮುಚ್ಚಿಸಿದ್ದು ಸಾಕು, ಕಾವೇರಿ ತೀರ್ಪು, ಸುಪ್ರೀಂ ಕೋಟ್ ಎಂದು ಜನರನ್ನು ಗುಗ್ಗುಗಳನ್ನಾಗಿ ಮಾಡಬೇಡಿ ಎಂದು ಮೇಕೆದಾಟು ಹೋರಾಟ ಸಮಿತಿಯ ಪದಾಧಿಕಾರಿಗಳೂ ಕಿಡಿ ಕಾರಿದ್ದಾರೆ. ಮತ್ತೆ ಹೋರಾಟಕ್ಕೆ ನಾಂದಿ ಹಾಡಿದ್ದಾರೆ.
Related Articles
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಿದಟಛಿವಾದ ಡಿಪಿಆರ್ ನೊಂದಿಗೆ ಮೇಕೆದಾಟು ಯೋಜನೆಯ ಪ್ರಸ್ತಾವನೆ ಕೇಂದ್ರ ಜಲ ಆಯೋಗ ಅನುಮೋದನೆಗಾಗಿ 2017ರ ಜೂನ್‌ನಲ್ಲಿ ಕಳುಹಿಸಿದೆ. ತಮಿಳುನಾಡು ಸಿಎಂ 2017ರ ಜುಲೈನಲ್ಲಿ ತಗಾದೆ ತೆಗೆದು ತಮಿಳು ನಾಡನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಕರ್ನಾಟಕ ಕಳುಹಿಸಿರುವ ಪ್ರಸ್ತಾವನೆಯನ್ನು ಪರಿಗಣಿಸಬಾರದೆಂದು ಪ್ರಧಾನಮಂತ್ರಿ ಅವರಿಗೆ ಪತ್ರವನ್ನು ಬರೆದಿದ್ದರು.
Advertisement
ಬಿ.ವಿ.ಸೂರ್ಯ ಪ್ರಕಾಶ್