ಕೋಲಾರಕ್ಕೆ ಕುಡಿಯುವ ನೀರು ಒದಗಿಸಲು ಯೋಜನೆ ಎಂಬ ಸರ್ಕಾರದ ಅವಿವೇಕದ ಹೇಳಿಕೆಯಿಂದಾಗಿ ಮೇಕೆದಾಟು ಯೋಜನೆಗೆ ತಡೆ
ಯುಂಟಾಗಿದೆ ಎಂದು ಜಲತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಆರೋಪಿಸಿದರು.
Advertisement
ಮೇಕೆದಾಟು ಯೋಜನೆಯಿಂದಾಗಿ ಅನಗತ್ಯವಾಗಿ ಹರಿದು ಹೋಗುವ ನೀರನ್ನು ತಡೆದು ಜಲ ವಿದ್ಯುತ್ ಯೋಜನೆಗೆ ಬಳಸಿಕೊಳ್ಳುವುದರ ಜತೆಗೆಕಾಲ ಕಾಲಕ್ಕೆ ತಮಿಳುನಾಡಿಗೆ ನೀರು ಕೊಡಲು ಅನುಕೂಲವಾಗುತ್ತದೆ. ಆದರೆ, ರಾಜ್ಯ ಸರ್ಕಾರ ಹೈಡ್ರೋ ಪ್ರಾಜೆಕ್ಟ್ಗಾಗಿ ಮಾತ್ರ ಯೋಜನೆ ರೂಪಿಸಲಾಗಿದೆ ಎನ್ನುವುದನ್ನು ಬಿಟ್ಟು ಇಲ್ಲದ ಗೊಂದಲ ಮೂಡಿಸಿದ್ದರಿಂದ ಯೋಜನೆ ನನೆಗುದಿಗೆ ಬೀಳುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವರ್ಷ ಮಾತ್ರ ಸಮರ್ಪಕವಾಗಿ ಮಳೆಯಾಗುತ್ತದೆ. ಉಳಿದಂತೆ 7 ರಿಂದ 8 ವರ್ಷ ಅನಾವೃಷ್ಟಿ ಉಂಟಾಗುತ್ತದೆ. ಈ ವಿಚಾರ ಕೆಆರ್‌ಎಸ್ ಕಟ್ಟುವ
ಮುನ್ನವೇ ತಮಿಳುನಾಡಿನ ತಜ್ಞರು ಅರಿತು ನಾಲ್ಕು ವರ್ಷ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಅಣೆಕಟ್ಟೆ ವ್ಯರ್ಥ ಎಂಬ ಅಭಿಪ್ರಾಯವನ್ನು ನೀಡಿದ್ದರು ಎಂದು ಉಲ್ಲೇಖೀಸಿದ್ದರು ಎಂದರು. ಇದನ್ನೂ ಓದಿ:ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು: ಖರ್ಗೆ
Related Articles
ಇಂಥ ಮಹತ್ವದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಾರದೆ ರಾಜ್ಯದ ಪರ ವಕೀಲ ನಾರಿಮನ್ ಮುಚ್ಚಿಟ್ಟು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಸರ್ಕಾರದ ಸಾಲಿಸಿಟರ್ ಜನರಲ್ ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯ ಪ್ರವೇಶಿಸುವಂತಿಲ್ಲ. ಅದೇನಿದ್ದರೂ ಸಂಸತ್ತಿಗೆ ಸಂಬಂಧಿಸಿದ್ದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ, ಅಂತಾರಾಜ್ಯ ನದಿ ನೀರಿನ ವಿವಾದವನ್ನು ಸುಪ್ರೀಂ ಕೋರ್ಟ್ ನಲ್ಲೂ ವಿಚಾರಣೆ ಮಾಡಬಹುದು ಎಂಬ ಅಭಿಪ್ರಾಯವನ್ನು ತಿಳಿಸುವ ಮೂಲಕ ಸ್ವತಃ ತಾವೇ ಹಗ್ಗಕೊಟ್ಟು ಕೈಕಟ್ಟಿಸಿಕೊಂಡಂತೆ ಮಾಡಿದರು. ರಾಜ್ಯಕ್ಕೆ ಇಂತಹ ಸಂಕಷ್ಟ ಬರಲು ವಕೀಲ ನಾರಿಮನ್ ಅವರೇ ಕಾರಣರಾಗಿದ್ದಾರೆ ಎಂದು ದೂರಿದರು.
Advertisement
ಸಂಕಷ್ಟ ಸೂತ್ರದಲ್ಲೂ ತಮಿಳುನಾಡಿಗೆ ನೀರು:ಸಂಕಷ್ಟ ಸೂತ್ರ ಇದ್ದರೂ ಅದು ವರ್ಷದ ಕೊನೆಯಲ್ಲಿ ಗಣನೆಗೆ ಬರುತ್ತದೆ. ಅಷ್ಟರಲ್ಲಿ ಬಿಡುಗಡೆ ಮಾಡಬೇಕಾಗಿದ್ದ ನೀರು ತಮಿಳುನಾಡಿನ
ಪಾಲಾಗಿರುತ್ತದೆ. ಆಗ ಏನು ಮಾಡುವುದು ಎಂಬ ಬಗ್ಗೆ ಯಾವುದೇ ಉಲ್ಲೇಖವೂ ಇಲ್ಲ. ಈ ಬಗ್ಗೆ ವಕೀಲರು ಸುಪ್ರೀಂಕೋರ್ಟ್‌ನ ಗಮನಕ್ಕೆ ತರದಿರುವುದುದುರ್ದೈವದ ಸಂಗತಿಯಾಗಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಪಾಂಡವಪುರ ವಿಜಯ ಕಾಲೇಜಿನ ಅಧ್ಯಕ್ಷ ಬಸವರಾಜುಗೋಷ್ಠಿಯಲ್ಲಿದ್ದರು. ರಾಜ್ಯ ಸರ್ಕಾರದ ವೈಫಲ್ಯ ದಿಂದಲೇ ಮೇಕೆದಾಟು ಯೋಜನೆ ಜಾರಿಗೆ ತಡೆಯುಂಟಾಗಿದೆ. ಜಲ ವಿದ್ಯುತ್ ಉತ್ಪಾದನೆ ಹಾಗೂ ತಮಿಳು
ನಾಡಿಗೆ ನೀರು ಹರಿಸುವ ಉದ್ದೇಶದಿಂದ ಎಂದು ವಾದ ಮಂಡಿಸ ಬೇಕಾಗಿತ್ತು. ಆದರೆ ಬೆಂಗಳೂರು ಹಾಗೂ ಕೋಲಾರಕ್ಕೆ ಕುಡಿಯುವ ನೀರು ಒದಗಿಸಲು ಎಂದು ಹೇಳಿದ್ದರಿಂದಲೇ ತಡೆಯಾಗಿದೆ.
– ಅರ್ಜುನಹಳ್ಳಿ ಪ್ರಸನ್ನಕುಮಾರ್,ಜಲತಜ್ಞ